ADVERTISEMENT

ಮೋಸದ ಕರೆ: ಜಾಗೃತರಾಗಿರಿ

ಎಚ್‌.ಕೆ.ಶಕುಂತಳ ಬೆಂಗಳೂರು
Published 16 ಸೆಪ್ಟೆಂಬರ್ 2014, 19:30 IST
Last Updated 16 ಸೆಪ್ಟೆಂಬರ್ 2014, 19:30 IST

ಡಿ.ಎಸ್‌. ನಾಗಭೂಷಣ ಅವರ ಪತ್ರಕ್ಕೆ (ಹಿಂದಿ ದೇಶ: ಆದೇಶ. ಸೆ. 8) ಪ್ರತಿಕ್ರಿಯೆ.
ನನಗೂ ಕೆಲವು ದಿನಗಳ ಹಿಂದೆ ಇದೇ ರೀತಿ ಸ್ಥಿರ ದೂರವಾಣಿಗೆ ಹಿಂದಿಯಲ್ಲಿ ಕರೆ ಬಂತು. ‘ನಿಮ್ಮ ಜೀವವಿಮಾ ಪಾಲಿಸಿಗೆ ನೀಡುತ್ತಿರುವ ಡಿವಿಡೆಂಡ್‌ ನೀವು ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಬ್ಯಾಂಕ್‌ ಖಾತೆ ವಿವರ ಮತ್ತು ಪಾನ್‌ (PAN) ನಂಬರ್‌ ಕೊಡಿ. ನಿಮ್ಮ ಖಾತೆಗೆ ನೇರ ಜಮಾ ಮಾಡುತ್ತೇವೆ’ ಎಂದರು.

ಅವರಿಗೆ 10 ನಿಮಿಷ ಬಿಟ್ಟು ಕರೆ ಮಾಡಲು ಹೇಳಿ, ಜೀವವಿಮಾ ಕಚೇರಿಗೆ ಕರೆ ಮಾಡಿ ವಿಚಾರಿಸಲಾಗಿ ವಿಮಾ ದೂರು ಪ್ರಾಧಿಕಾರ ಅಂತ ಪ್ರತ್ಯೇಕ ಕಚೇರಿ ಇಲ್ಲ ಮತ್ತು ಆ ಪಾಲಿಸಿಗೆ ಯಾವ ಡಿವಿಡೆಂಡ್‌ ನೀಡುತ್ತಿಲ್ಲ ಎಂದು ತಿಳಿಸಿದರು. ಇಂಟರ್‌ನೆಟ್‌ನಲ್ಲೂ ಅನೇಕ ಜನರು ತಮಗೆ ಇಂತಹ ಕರೆಗಳು ಬಂದಿರುವುದಾಗಿ ತಿಳಿಸಿರುತ್ತಾರೆ. ಆದ್ದರಿಂದ ಇದು ಮೋಸದ ಜಾಲದ ಕರೆ. ನಾವು ಜಾಗೃತರಾಗಿ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.