ADVERTISEMENT

ಮೌಲ್ಯ ಗೌರವಿಸಿ

ಜ.ಹೊ.ನಾ. ಹಾಸನ
Published 6 ಮೇ 2016, 19:30 IST
Last Updated 6 ಮೇ 2016, 19:30 IST

ಯಾವುದೇ ರಾಜ್ಯದ ಯಾವುದೇ ಮುಖ್ಯಮಂತ್ರಿ ಆಯ್ಕೆಯಾದಾಗ ಮಾಡುವ ಘೋಷಣೆ ಏಕ ವ್ಯಕ್ತಿಯದಾಗಿರಬಾರದು. ಅದು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ. ಅದು ಪರೋಕ್ಷವಾಗಿ ಸರ್ವಾಧಿಕಾರದ ಪ್ರತೀಕವಾಗಿಬಿಡುತ್ತದೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾದಾಗ ಏಕವ್ಯಕ್ತಿಯ ತೀರ್ಮಾನದಂತೆ ಅನ್ಯಭಾಗ್ಯ ಯೋಜನೆಯನ್ನು ಘೋಷಿಸಲಾಯ್ತು. ಅದು ಕಾಲಾನಂತರ ಅನೇಕ ಆಂತರಿಕ ಬದಲಾವಣೆಗಳಿಗೆ ಒಳಗಾಗಿರುವುದು ಈಗ ಕಣ್ಮುಂದೆ ಇದೆ. ಹಾಗೆ ಘೋಷಿಸಿದ ಅನೇಕ ಭಾಗ್ಯಗಳು ಬದುಕಿಗೆ ಭಾಗ್ಯವನ್ನು ತರದೆ ಫಲಾನುಭವಿಗಳು ನಿರ್ಭಾಗ್ಯರಾಗಿರುವುದು ಕರ್ನಾಟಕದಲ್ಲಿ ಕಣ್ಮುಂದೆ ಇದೆ.

ಭಾರತದಲ್ಲಾಗಲೀ, ರಾಜ್ಯಗಳಲ್ಲಾಗಲೀ ಮೌಲ್ಯಯುತ ರಾಜಕಾರಣ ಎಂದಿಗೆ ಬಂದೀತು?  ಸ್ವತಂತ್ರ  ಭಾರತದಲ್ಲಿ ರಾಜಕಾರಣಕ್ಕಿಂತ ರಾಜಕೀಯ  ವ್ಯಾಪಕವಾಗಿ ಮೇಲುಗೈ ಸಾಧಿಸಿದೆ. ಮೌಲ್ಯಯುತ ರಾಜಕಾರಣ ಬಂದ ದಿನ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತಾಗುತ್ತದೆ. ಅದು ಆಗುವ ಕಾಲ ಬಂದೀತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.