ADVERTISEMENT

ರಾಜಕೀಯ ಕಸುವಿಲ್ಲ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 19:30 IST
Last Updated 8 ಫೆಬ್ರುವರಿ 2017, 19:30 IST
ರಾಜ್ಯಪಾಲ ವಜುಭಾಯಿ ವಾಲಾ ಅವರು ಇತ್ತೀಚೆಗೆ ವಿಧಾನ ಮಂಡಲದಲ್ಲಿ ಹಿಂದಿಯಲ್ಲಿ ಮಾತನಾಡಿದ್ದಾರೆ. ಅವರು ಕರ್ನಾಟಕದ ಆಡಳಿತದ ನೆಲೆಯಲ್ಲಿ ನಿಂತಾಗ ಕನ್ನಡದಲ್ಲಿ ಮಾತನಾಡಬೇಕು ಇಲ್ಲವೇ ಅವರ ಮಾತುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಏರ್ಪಾಟು ಮಾಡಬೇಕು.
 
ಹಿಂದೆ ಮಾರ್ಗರೇಟ್ ಆಳ್ವ ಅವರು ಉತ್ತರಾಖಂಡದ ರಾಜ್ಯಪಾಲರಾಗಿದ್ದಾಗ ಇಂಗ್ಲಿಷ್‌ನಲ್ಲಿ ಮಾತನಾಡಿದ್ದನ್ನು ವಿರೋಧಿಸಿ ಅಲ್ಲಿನ ರಾಜಕಾರಣಿಗಳು ಗಟ್ಟಿಯಾಗಿ ಸೊಲ್ಲೆತ್ತಿದ್ದರು. ಆದರೆ ನಮ್ಮ ರಾಜಕಾರಣಿಗಳು ತಮ್ಮ ಕಣ್ಣ ಮುಂದೆಯೇ ಹಿಂದಿ ಹೇರಿಕೆ ನಡೆಯುತ್ತಿದ್ದರೂ ಸೊಲ್ಲೆತ್ತಲಿಲ್ಲ. ಕರುನಾಡಿನಲ್ಲಿ ರಾಜಕೀಯ ಕಸುವಿಲ್ಲವೆಂದು ಹೇಳುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ. 
 
ಸುದ್ದಿವಾಹಿನಿಯೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡು ವಾಗ ಮಾಜಿ ಮುಖ್ಯಮಂತ್ರಿಯೊಬ್ಬರು ‘ಹಿಂದಿ ರಾಷ್ಟ್ರಭಾಷೆ’ ಎಂದು ಹೇಳಿದರು. ಆದರೆ ಸಂವಿಧಾನದಲ್ಲಿ ಯಾವ ಭಾಷೆಗೂ ‘ರಾಷ್ಟ್ರಭಾಷೆ’ಯ ಸ್ಥಾನಮಾನ ನೀಡಿಲ್ಲ. ಹೀಗಿದ್ದರೂ ಈ ಬಗೆಯ ಹೇಳಿಕೆಗಳನ್ನು ನೀಡುವುದು ತಪ್ಪು. 
-ವಿವೇಕ್ ಶಂಕರ್, ಬೆಂಗಳೂರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.