ADVERTISEMENT

ರಾಜ್ಯಗಳಿಗೆ ಬಿಡಬೇಕು

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 19:30 IST
Last Updated 28 ಜೂನ್ 2016, 19:30 IST

ಹಿಂದೆ ರಾಮನಗರದ ರೇಷ್ಮೆ ಬೆಳೆಗಾರರು ತಾವು ಬೆಳೆದ ರೇಷ್ಮೆಗೆ ಬೆಂಕಿ ಹಾಕಿದ್ದರು. ಈಗ ಅಡಿಕೆ ಬೆಳೆಗಾರರು ತಮ್ಮ ಬೆಳೆಯನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಸ್ಥಿತಿ ಉಂಟಾಗಿದೆ. ಆಗ ಚೀನಾದಿಂದ ಬಂದ ರೇಷ್ಮೆಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದ್ದು ಸ್ಥಳೀಯ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗಿತ್ತು.

ಈಗ ಸಾರ್ಕ್ ದೇಶಗಳ ನಡುವೆ ಇರುವ ಮುಕ್ತ ಮಾರುಕಟ್ಟೆಯ ಕಟ್ಟಲೆಗಳಿಂದಾಗಿ, ಹೊರನಾಡಿನಿಂದ ಬರುವ ಕಡಿಮೆ ಬೆಲೆಯ ಅಡಿಕೆ ಇಲ್ಲಿನ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದು ಇಲ್ಲಿನ ಅಡಿಕೆ ಬೆಳೆಗಾರರಿಗೆ ತುಂಬಾ ಹಾನಿಯನ್ನು ಉಂಟುಮಾಡುತ್ತದೆ. ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಕೇಂದ್ರ ಸರ್ಕಾರ ಎಲ್ಲರ ಹಿತ ಕಾಪಾಡುವುದು ಸರಿ. ಆದರೂ ಈ ರೀತಿ ತೊಂದರೆಗಳಾಗದಂತೆ ನೋಡಿಕೊಳ್ಳಬೇಕಾದರೆ ಇಂತಹ ತೀರ್ಮಾನಗಳನ್ನು ರಾಜ್ಯಗಳಿಗೆ ಬಿಡುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.