ADVERTISEMENT

ರಾಸಾಯನಿಕ ಕ್ರಿಯೆಯಿಂದ ಪರಿಣಾಮ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ನವೆಂಬರ್ 2014, 19:30 IST
Last Updated 27 ನವೆಂಬರ್ 2014, 19:30 IST

ಮಡೆ ಮಡೆ ಸ್ನಾನದ ಕುರಿತು ನ್ಯಾಯಾ­ಲಯ ನೀಡಿರುವ ತೀರ್ಪಿನಿಂದ ಕೆಲವರಿಗೆ ಸಮಾಧಾನವಾದರೂ ಬಹಳಷ್ಟು ಜನರಲ್ಲಿ ಅಸಮಾಧಾನವಿದೆ.

ಎಂಜಲು ಬಾಳೆಯ ಮೇಲೆ ಹೊರಳಾಡುವುದಕ್ಕೂ, ಚರ್ಮ ವ್ಯಾಧಿ ನಿವಾರಣೆಗೂ ಯಾವುದೇ ವೈಜ್ಞಾನಿಕ ಸಂಬಂಧವಿಲ್ಲ ಎಂಬುದು ಅನೇಕರ ವಾದ. ಆದರೆ ಮಡೆ ಮಡೆ ಸ್ನಾನದಲ್ಲಿ ವೈಜ್ಞಾನಿಕತೆ ಇದೆ. ಧಾರ್ಮಿಕ ವಿಚಾರಗಳಲ್ಲಿ ಎಷ್ಟರಮಟ್ಟಿಗೆ ವೈಜ್ಞಾನಿಕತೆ ಇದೆ
ಎಂದು ಹುಡುಕ ಹೊರಟೆ. ಮನುಷ್ಯನ ಶರೀರದಲ್ಲಿ ಅನೇಕ ರೀತಿಯ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಪ್ರತಿ ಭಾವನೆಯ ಹಿಂದೆ ಒಂದು ರೀತಿಯ ರಾಸಾಯನಿಕ ಕ್ರಿಯೆ ನಡೆದು ಅದು ಮನುಷ್ಯರ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಅದೇ ರೀತಿ ಬೇರೆಯವರ ಎಂಜಲು ಬಾಳೆಯ ಮೇಲೆ ಹೊರಳಾಡುವಾಗ ಆ ವ್ಯಕ್ತಿಗೆ ಅಸಹ್ಯ ಭಾವ ಉಂಟಾಗುತ್ತದೆ. ಈ ಸಂವೇದನೆಯಿಂದ ಮಿದುಳು ಒಂದು ರೀತಿ ಹಾರ್ಮೋನ್‌ ಉತ್ಪತ್ತಿ ಮಾಡಿ ಆ ರಾಸಾಯ­ನಿಕವೇ ಚರ್ಮವ್ಯಾಧಿ ಗುಣಪಡಿಸುತ್ತದೆ. ಇದು ಅವೈಜ್ಞಾನಿಕವಲ್ಲ.

ಕೆಲವೊಮ್ಮೆ ವೈದ್ಯರು ಗುಣಪಡಿಸಲಾಗದ ವ್ಯಾಧಿಗಳು ಧಾರ್ಮಿಕ ಕ್ಷೇತ್ರದಲ್ಲಿ ಪವಾಡದ ರೀತಿಯಲ್ಲಿ ಗುಣವಾಗುತ್ತವೆ. ಅದು ಶರೀರ­ದಲ್ಲಿ ಆಗುವ ರಾಸಾಯನಿಕ ಬದಲಾವ­ಣೆಯೇ ಹೊರತು ಬೇರೇನೂ ಅಲ್ಲ ಎಂದು ನನ್ನ ಅನಿಸಿಕೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.