ADVERTISEMENT

ರೋಹಿಂಗ್ಯಾ ಮುಸಲ್ಮಾನರಿಗೆ ಆಶ್ರಯ ವಿಚಾರ: ನಿಲುವು ಸ್ಪಷ್ಟಪಡಿಸಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 19:30 IST
Last Updated 14 ಸೆಪ್ಟೆಂಬರ್ 2017, 19:30 IST
ರೋಹಿಂಗ್ಯಾ ಮುಸಲ್ಮಾನರಿಗೆ ಆಶ್ರಯ ವಿಚಾರ: ನಿಲುವು ಸ್ಪಷ್ಟಪಡಿಸಿ
ರೋಹಿಂಗ್ಯಾ ಮುಸಲ್ಮಾನರಿಗೆ ಆಶ್ರಯ ವಿಚಾರ: ನಿಲುವು ಸ್ಪಷ್ಟಪಡಿಸಿ   

‘ಭಾರತದಲ್ಲಿ ಅಲ್ಪಸಂಖ್ಯಾತರು ಬದುಕುವುದು ಕಷ್ಟವಾಗುತ್ತಿದೆ’ ಎಂದು ಒಂದಷ್ಟು ಬುದ್ಧಿಜೀವಿಗಳು ಹಲವು ಬಾರಿ ಹೇಳಿದ್ದಿದೆ. ಹಿಂದಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರೂ, ‘ಮುಸ್ಲಿಮರಿಗೆ ಈ ದೇಶದಲ್ಲಿ ಅಭದ್ರತೆ ಕಾಡುತ್ತಿದೆ’ ಎಂದಿದ್ದರು.

ಆದರೆ ಅದೇ ಬುದ್ಧಿಜೀವಿಗಳು ಇಂದು ರೋಹಿಂಗ್ಯಾ ಮುಸಲ್ಮಾನರಿಗೆ ಭಾರತದಲ್ಲಿ ಆಶ್ರಯ ನೀಡಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಲ್ಲಿರುವ ಮುಸಲ್ಮಾನರಿಗೇ ಭದ್ರತೆ ಇಲ್ಲವೆಂದ ಮೇಲೆ ಬೇರೆ ದೇಶದ ಮುಸಲ್ಮಾನರಿಗೆ ಇಲ್ಲಿ ನೆಲೆಸಲು ಅವಕಾಶ ಕೊಡುವುದರ ಉದ್ದೇಶವೇನು? ಪ್ರಪಂಚದಲ್ಲಿರುವ ಎಲ್ಲಾ ಮುಸಲ್ಮಾನರನ್ನು ಇಲ್ಲಿಗೆ ಕರೆತರುವುದು ಇವರ ಉದ್ದೇಶವೇ ಅಥವಾ ಮುಸಲ್ಮಾನರಿಗೆ ಸ್ವಾಭಿಮಾನದಿಂದ ಬದುಕಲು ಅವಕಾಶ ಕೊಡುವ ಪ್ರಪಂಚದ ಏಕೈಕ ದೇಶ ಭಾರತ ಎಂಬುದು ಇವರ ಭಾವನೆಯೇ? ಬುದ್ಧಿಜೀವಿಗಳು ತಮ್ಮ ನಿಲುವು ಸ್ಪಷ್ಟಪಡಿಸಬೇಕು.

–ಮಂಜುನಾಥ ಸು.ಮ., ಚಿಂತಾಮಣಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.