ADVERTISEMENT

ವಿನಾಕಾರಣ ಕ್ಯಾತೆ

ವಿಜಯ್ ಹೆಮ್ಮಿಗೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಕಾವೇರಿ ನೀರಿನ ವಿಚಾರದಲ್ಲಿ ನೆರೆಯ ತಮಿಳುನಾಡು ತೆಗೆಯುತ್ತಿರುವ ಕ್ಯಾತೆಯನ್ನು ನೋಡಿದರೆ ‘ಹರಿಯೋ ನೀರಿಗೆ ದೊಣ್ಣೆನಾಯಕನ ಅಪ್ಪಣೆ’ ಎಂಬ ಗಾದೆ ನೆನಪಾಗುತ್ತದೆ. 

ಇಷ್ಟು ದಿನವೂ ಕೆ.ಆರ್.ಎಸ್. ನಿಂದ ಇಷ್ಟು ಟಿಎಂಸಿ ಅಡಿ ನೀರು ಬೇಕು ಎಂದೆನ್ನುತ್ತಾ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ತಮಿಳುನಾಡು, ಇದೀಗ ರಾಜ್ಯವು ಮೇಕೆದಾಟಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಯೋಜನೆಯ ಬಗ್ಗೆ ಆಕ್ಷೇಪ ಎತ್ತಿದೆ.  ತಮಿಳುನಾಡು ಸರ್ಕಾರದ ನಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ನೀರಿನ ವಿಚಾರದಲ್ಲಿಯೇ ಅಲ್ಲಿಯ ಜನರ ಭಾವನೆಗಳೊಂದಿಗೆ ತಮ್ಮ ಬೇಳೆ ಬೇಯಿಸಿಕೊಳ್ಳುವ ನಡೆ ಸ್ಪಷ್ಟವಾಗಿ ಕಾಣಿಸುತ್ತದೆ. 
ಮೇಕೆದಾಟುವಿನಲ್ಲಿ ಕಿರು ಅಣೆಕಟ್ಟು ನಿರ್ಮಾಣ ಮಾಡಿದರೆ, ತಮಿಳುನಾಡಿಗೆ ಆಗುವ ನಷ್ಟವೇನು?  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.