ADVERTISEMENT

ಶಿಕ್ಷೆಯ ಭಯ ಮೂಡಿಸಿ

ಕೆ.ಎನ್‌.ಕೃಷ್ಣಮೂರ್ತಿ, ಬೆಂಗಳೂರು
Published 29 ಮೇ 2015, 19:30 IST
Last Updated 29 ಮೇ 2015, 19:30 IST

‘ಜೀತ ಕಾರ್ಮಿಕರ ರಕ್ಷಣೆ’ (ಪ್ರ.ವಾ., ಮೇ 29) ಸುದ್ದಿ ಓದಿ ಬೇಸರವಾಯಿತು. ಜೀತ ಪದ್ಧತಿಯನ್ನು ನಿಷೇಧಿಸಿದ್ದರೂ ಅದು ಬೇರೆ ಬೇರೆ ರೂಪಗಳಲ್ಲಿ ಇನ್ನೂ ಚಲಾವಣೆಯಲ್ಲಿ ಇರುವುದು ಶೋಚನೀಯ.

ದಲ್ಲಾಳಿಗಳ ಮೂಲಕ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿಕೊಂಡು ಅವರನ್ನು ಜೀತಕ್ಕೆ ದುಡಿಸಿಕೊಳ್ಳುವುದು ಅಮಾನವೀಯ. ಕನಿಷ್ಠ ಸೌಲಭ್ಯ ಹಾಗೂ ಕೂಲಿಯನ್ನೂ ನೀಡದೆ ಗುಲಾಮರಂತೆ ಅವರನ್ನು ಕೆಲಸಕ್ಕೆ ಬಳಸಿಕೊಳ್ಳುವುದು ನಾಗರಿಕ ಸಮಾಜಕ್ಕೆ ಶೋಭೆ ತರುವ ಸಂಗತಿಯಲ್ಲ.

ಅಗರಬತ್ತಿ ಕಾರ್ಖಾನೆಯಲ್ಲಿ  ರಕ್ಷಿಸಲಾದ 107 ಮಂದಿ ಜೀತದಾಳುಗಳಲ್ಲಿ ಐದರಿಂದ ಹತ್ತು ವರ್ಷದ ಆರು ಮಕ್ಕಳೂ ಇದ್ದರು ಎನ್ನುವುದು ಮತ್ತೂ ದುರಂತದ ಅಂಶ. ಕಾನೂನು–ಕಟ್ಟಳೆಗಳು ಇದ್ದರೂ ರಂಗೋಲಿ ಕೆಳಗೆ ನುಸುಳುವ ಜನ ಇದ್ದೇ ಇರುತ್ತಾರೆ. ಕಾನೂನು ಇನ್ನಷ್ಟು ಬಿಗಿಯಾಗಬೇಕು. ಶಿಕ್ಷೆಯ ಭಯ ಮೂಡಿಸಬೇಕು. ಇಲ್ಲವಾದರೆ ಜೀತ ಪದ್ಧತಿಯನ್ನು ಕೊನೆಗಾಣಿಸಲು ಸಾಧ್ಯವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.