ADVERTISEMENT

ಸಂತ್ರಸ್ತೆಗಲ್ಲ ಬಹಿಷ್ಕಾರ

​ಉಷಾ ಜೆ., ಭದ್ರಾವತಿ
Published 18 ನವೆಂಬರ್ 2015, 19:30 IST
Last Updated 18 ನವೆಂಬರ್ 2015, 19:30 IST

ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ತೀವ್ರ ಆತಂಕ ಒಡ್ಡುತ್ತಿವೆ. ದೇಶ ಆರ್ಥಿಕವಾಗಿ ಮುನ್ನಡೆ ಸಾಧಿಸುತ್ತಿದ್ದರೂ, ಪುರುಷರಿಗೆ ಜನ್ಮ ನೀಡುವ ಸ್ತ್ರೀಯರು ಮಾತ್ರ ಲಿಂಗ ಅಸಮಾನತೆ ಮತ್ತು ಲೈಂಗಿಕ ದೌರ್ಜನ್ಯದ ಕರಾಳ ಛಾಯೆಯಡಿ ಬದುಕುತ್ತಿದ್ದಾರೆ.

ಅತ್ಯಾಚಾರ ಮಹಿಳೆಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆಯಂತೆ ಕಾಡಿದರೆ, ಸಾಮೂಹಿಕ ಅತ್ಯಾಚಾರದಂಥ ಹೀನಕೃತ್ಯ ಆಕೆಯನ್ನು ಇನ್ನಿಲ್ಲದಂತೆ ಗಾಸಿಗೊಳಿಸುತ್ತದೆ. ಲೈಂಗಿಕ ಶೋಷಣೆಗೆ ಒಳಗಾಗುವ ಮಹಿಳೆ ದೀರ್ಘಕಾಲದ ದೈಹಿಕ  ಅನಾರೋಗ್ಯ, ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಾಳೆ. ಕೆಲವೊಮ್ಮೆ ಎಚ್ಐವಿ ಸೋಂಕಿಗೂ  ತುತ್ತಾಗಬಹುದು. ಸಾಮಾಜಿಕ ಸಂಬಂಧಗಳು  ಹಳಸುತ್ತವೆ. ಕೊನೆಗೆ ಸಮಾಜದ ಸಂಕುಚಿತ ಧೋರಣೆಯೇ ಆಕೆಯ ಜೀವಕ್ಕೆ ಮುಳುವಾಗುತ್ತದೆ.

ಸರ್ಕಾರ ಅತ್ಯಾಚಾರ ವಿರುದ್ಧದ ಕಾನೂನಿಗೆ ತಿದ್ದುಪಡಿ ತಂದರೂ ಪರಿಸ್ಥಿತಿ ಬದಲಾಗಿಲ್ಲ. ಪ್ರಮುಖವಾಗಿ ಸಮಾಜ ಸ್ತ್ರೀಯರ ಬಗ್ಗೆ ಹೊಂದಿರುವ ಧೋರಣೆ ಬದಲಾಗಬೇಕು. ಲೈಂಗಿಕ ಶೋಷಣೆ ನಡೆದಾಗ ತನ್ನದಲ್ಲದ ತಪ್ಪಿಗೆ ಮಹಿಳೆಯನ್ನು  ಚಾರಿತ್ರ್ಯಹೀನಳನ್ನಾಗಿ ಮಾಡುವ ಬದಲು ತಪ್ಪಿತಸ್ಥನನ್ನು ಸಾಮಾಜಿಕವಾಗಿ ಬಹಿಷ್ಕರಿಸುವಂತೆ ಆಗಬೇಕು.

ಪುರುಷರಷ್ಟೇ ಸ್ತ್ರೀಯರೂ ವೈಚಾರಿಕವಾಗಿ ಪ್ರಬುದ್ಧರು ಎಂಬುದನ್ನು ಯಾವುದೇ ಆಷಾಢಭೂತಿತನ ತೋರದೆ ಒಪ್ಪಿಕೊಳ್ಳಬೇಕು. ಜೊತೆಗೆ ಸ್ತ್ರೀಯರೂ ತಮ್ಮ ಜನ್ಮಸಿದ್ಧ ಹಕ್ಕುಗಳು ಯಾರ ಕೃಪೆಯೆಂದಲೂ ತಮಗೆ ಸಿಗುತ್ತಿರುವುದಲ್ಲ ಎಂಬುದನ್ನು ಅರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.