ADVERTISEMENT

ಸಂಪರ್ಕ ಕೇಂದ್ರಗಳನ್ನು ಆರಂಭಿಸಿ

ಜಿ.ಸಿದ್ದಗಂಗಯ
Published 21 ಏಪ್ರಿಲ್ 2014, 19:30 IST
Last Updated 21 ಏಪ್ರಿಲ್ 2014, 19:30 IST

ಬಿಬಿಎಂಪಿಯವರು 2014–15ನೇ ಸಾಲಿನ ಆಸ್ತಿ ತೆರಿಗೆಯ ಸಂಗ್ರಹಣೆಯನ್ನು ಏಪ್ರಿಲ್ 1ರಿಂದ ಆರಂಭ ಮಾಡಿರುವುದು ಸರಿಯಷ್ಟೆ. ಅದರಂತೆ ಬಿಬಿಎಂಪಿ ವಲಯದ ಲಗ್ಗೆರೆಯಲ್ಲಿ ಕಳೆದ ವರ್ಷ ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರ ವಲಯಗಳಲ್ಲಿ ಬಿಬಿಎಂಪಿಯ ಎರಡು ಸಂಪರ್ಕ ಕೇಂದ್ರಗಳು ಇದ್ದು,

ಈ ಎರಡೂ ಸಂಪರ್ಕ ಕೇಂದ್ರಗಳಲ್ಲಿ ಆಸ್ತಿದಾರರು ಅರ್ಜಿ ನಮೂನೆಗಳನ್ನು ಪಡೆದು, ಆಸ್ತಿ ತೆರಿಗೆಯನ್ನು ಪಾವತಿಸಲು ಅನುಕೂಲಕರವಾಗಿತ್ತು. ಆದರೆ ಈಗ ಈ ಎರಡೂ ಬಿಬಿಎಂಪಿ ಸಂಪರ್ಕ ಕೇಂದ್ರಗಳನ್ನು ಸ್ಥಗಿತಗೊಳಿಸಿರುವುದರಿಂದ ಲಗ್ಗೆರೆ ಸೇರಿದಂತೆ ಸುಮಾರು 10 ಹೊಸ ಬಡಾವಣೆಗಳಲ್ಲಿನ ಆಸ್ತಿದಾರರು 2014–15ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸಲು ಸುಮಾರು ನಾಲ್ಕೈದು ಕಿ.ಮೀ ದೂರ ಹೋಗಬೇಕಿದೆ.

ಸುಡು ಬಿಸಿಲಿನಲ್ಲಿ ಹೋಗಿ ಅರ್ಜಿ ಪಡೆದು ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಅರ್ಜಿ ಭರ್ತಿ ಮಾಡಿಕೊಡಲು ಹಣ ನೀಡಿ ಆನಂತರ ಆಸ್ತಿ ತೆರಿಗೆಯನ್ನು ನಗದು ಅಥವಾ ಡಿ.ಡಿ. ರೂಪದಲ್ಲಿ ಪಾವತಿಸಬೇಕಾಗಿದೆ.

ಈಗಲಾದರೂ ಸಂಬಂಧಪಟ್ಟ ಬಿಬಿಎಂಪಿ ಆಯುಕ್ತರು ಈ ಬಗ್ಗೆ ಗಮನಹರಿಸಿ, ಎರಡು ಮೂರು ತಿಂಗಳ ಮಟ್ಟಿಗಾದರೂ ಲಗ್ಗೆರೆಯಲ್ಲಿ ಪುನಃ ಸಂಪರ್ಕ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ ಆಸ್ತಿ ತೆರಿಗೆಯನ್ನು ಸುಲಭವಾಗಿ ಪಾವತಿ ಮಾಡಲು ಅವಕಾಶ ಕಲ್ಪಿಸಿಕೊಡುತ್ತಾರೆಂದು ಆಶಿಸೋಣವೇ?
–ಜಿ. ಸಿದ್ದಗಂಗಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT