ADVERTISEMENT

ಸಮರ್ಥರ ಕೊರತೆಯೇ?

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST

ರಾಜ್ಯದಲ್ಲಿ ಈಗ ಮತ್ತೊಮ್ಮೆ ಲೋಕಾಯುಕ್ತರ ನೇಮಕಾತಿ ಪರ್ವ ಶುರು ವಾಗಿದೆ. ಈ ಬಾರಿಯೂ ಲೋಕಾಯುಕ್ತರ ನೇಮಕಾತಿ ಒಂದು ಪ್ರಹಸನವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಈ ಹಿಂದೆ ಸರ್ಕಾರ ಶಿಫಾರಸು ಮಾಡಿದವರ ಮೇಲಿದ್ದ ವಿವಿಧ ಆರೋಪಗಳಿಂದಾಗಿ ಅವರು ಲೋಕಾಯುಕ್ತರಾಗಲು ಸಾಧ್ಯವಾಗಲಿಲ್ಲ. ಈ ಬಾರಿ ಅತೀ ಜಾಗರೂಕತೆಯಿಂದ ಹೆಸರುಗಳನ್ನು ಶಿಫಾರಸು ಮಾಡಬೇಕಾದ ಜವಾಬ್ದಾರಿ ಸರ್ಕಾರ ಮತ್ತು ರಾಜ್ಯಪಾಲರಿಗಿದೆ.

ದೇಶಕ್ಕೇ ನ್ಯಾಯ ಹೇಳುವ ನ್ಯಾಯಮೂರ್ತಿಗಳಲ್ಲಿ ಲೋಕಾಯುಕ್ತ ಹುದ್ದೆಗೇರುವ ಒಬ್ಬ ಪ್ರಾಮಾಣಿಕ ನ್ಯಾಯಮೂರ್ತಿಯನ್ನು ಹುಡುಕುವುದು ಇಷ್ಟೊಂದು ಕಷ್ಟವೇ ಎಂಬ ಪ್ರಶ್ನೆ ಜನರಲ್ಲಿದೆ. ಹಾಗೊಮ್ಮೆ ನ್ಯಾಯಮೂರ್ತಿಗಳ ಮೇಲೆ ಆರೋಪಗಳು ಇರುವುದೇ ಆದರೆ, ಅವರ ವಿರುದ್ಧ ಕಾನೂನು ಪ್ರಕರಣಗಳು ಯಾಕೆ ದಾಖಲಾಗುತ್ತಿಲ್ಲ? ನ್ಯಾಯಮೂರ್ತಿಗಳು ದೇಶದ ಕಾನೂನಿಗಿಂತ ದೊಡ್ಡವರೇ?
-ರವಿ ಸಾಗರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.