ADVERTISEMENT

ಸಾವು ಪರಿಹಾರವಲ್ಲ...

ಕೆ.ಜಿ.ಭದ್ರಣ್ಣವರ, ಮುದ್ದೇಬಿಹಾಳ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST

‘ದಯಾಮರಣಕ್ಕೆ 106 ಪಿ.ಡಿ.ಒ.ಗಳ ಮನವಿ’ (ಪ್ರ.ವಾ., ಡಿ. 9) ಸುದ್ದಿ ಓದಿ ಆತಂಕವಾಯಿತು. ವಿವಿಧ ಯೋಜನೆಗಳಲ್ಲಿ ನಿಗದಿತ ಗುರಿ ಸಾಧಿಸಲು ಒತ್ತಡ ಹೇರುತ್ತಿರುವುದರಿಂದ, ಮಾನಸಿಕ ಒತ್ತಡಕ್ಕೆ ಸಿಲುಕಿ, ಕೆಲಸ ಮಾಡಲಾಗದೇ, ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.

ನಿಗದಿತ ಗುರಿ ಸಾಧಿಸಲಾಗದೇ ಇರುವುದಕ್ಕೆ ಕಾರಣ­ಗಳನ್ನು ಸರ್ಕಾರದ ಉನ್ನತ ಅಧಿಕಾರಿಗಳು ವಿಶ್ಲೇ­ಷಣೆ ಮಾಡಬೇಕು. ಆಂಥ ಬಾಧಕ ಕಾರಣಗಳ ನಿವಾರಣೆಗೆ ಸೂಕ್ತ ಪರಿಹಾರಗಳನ್ನು ಕಂಡು­ಕೊಳ್ಳ­ಬೇಕು ಹಾಗೂ ಅವುಗಳನ್ನು ನಿವಾರಿಸಬೇಕು. ಪ್ರಜಾ­ಪ್ರಭುತ್ವದಲ್ಲಿ ಎಲ್ಲ ನಾಗರಿಕರಿಗೂ ಬದುಕುವ  ಹಕ್ಕಿದೆ; ಸಾವಿಗೆ ಆಸ್ಪದವಿಲ್ಲ. ಅಧಿಕಾರ, ವೇತನ, ಸಂಪತ್ತು .... ಇವೆಲ್ಲವುಗಳಿಗಿಂತ ಪ್ರಾಣ ಅತ್ಯಮೂಲ್ಯವಾದದ್ದೆಂದು ಪಿ.ಡಿ.ಒ.ಗಳು ನೆನಪಿಡಬೇಕು. ಬದುಕಿದ್ದರೆ, ಬೇರೆ ಯಾವುದಾದರೂ ಉದ್ಯೋಗ ಮಾಡುತ್ತಾ ಬದು­ಕಲು ಸಾಧ್ಯವಿದೆ. ಸಾವಿನಂಥ ಭಯಾನಕ ಪ್ರಸಂಗ ಎದುರಾದಾಗ, ತಮ್ಮ ನೌಕರಿಗೆ ರಾಜೀನಾಮೆ­ಯಿತ್ತು, ಮುಕ್ತರಾಗಬಹುದಲ್ಲ!? ಸಾವು ಯಾವ ಸಮಸ್ಯೆಗೂ ಪರಿಹಾರವಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.