ADVERTISEMENT

ಸಿ.ಎಂ.ಗೂ ಮೀಸಲಾತಿ

ಮುತ್ತು ಅಣ್ಣಳ್ಳಿ ರಾಮನಗರ
Published 4 ಮೇ 2016, 19:30 IST
Last Updated 4 ಮೇ 2016, 19:30 IST

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವಿಧಾನಸಭೆ ಸದಸ್ಯರಾಗಲು ಮಾತ್ರ ಇಂದಿನ ಸರ್ಕಾರಗಳು ಮೀಸಲಾತಿ ಪ್ರಕಟಿಸುತ್ತವೆ. ಆದರೆ ಪ್ರತಿ ವಿಧಾನಸಭೆ ಚುನಾವಣೆ ಬಂದಾಗಲೂ ತಮ್ಮ ತಮ್ಮ ಸಮುದಾಯಗಳ ವ್ಯಕ್ತಿಗಳಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಕೂಗು ಕೇಳಿ ಬರುತ್ತದೆ. ಈ ಕೂಗಿಗೆ ನ್ಯಾಯ ಮಾತ್ರ ಸಿಗುತ್ತಿಲ್ಲ.

ಈಗ ದಲಿತ ಮುಖ್ಯಮಂತ್ರಿ ಬೇಕು ಎಂಬ ವಾದಕ್ಕೆ ಪುಷ್ಟಿ ನೀಡಬೇಕಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅದರಲ್ಲಿರುವ ಪ್ರಭಾವಿ ಸಮುದಾಯದ ವ್ಯಕ್ತಿಗಳು ಮುಖ್ಯಮಂತ್ರಿ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ದಲಿತರು ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ ತೆರೆಮರೆಗೆ ಸರಿಯುವಂತೆ ಪಕ್ಷಗಳು ಮಾಡುತ್ತಿವೆ. ಆದ್ದರಿಂದ ಮುಖ್ಯಮಂತ್ರಿ ಸ್ಥಾನಕ್ಕೂ ಮೀಸಲಾತಿ ಪ್ರಕಟಿಸಿದರೆ ಆಗ ಎಲ್ಲ ಸಮುದಾಯದವರೂ ಈ ಸ್ಥಾನಕ್ಕೆ ಏರುವುದನ್ನು  ಕಾಣಬಹುದು.

ಹಿಂದಿನ ವರ್ಷಗಳನ್ನಾಧರಿಸಿ ಮತ್ತೆ 5 ವರ್ಷಗಳಿಗೆ ಮೀಸಲಾತಿ ಬದಲಿಸಬಹುದು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗಬಹುದು. ಈ ಮೂಲಕ ಎಲ್ಲ ಸಮುದಾಯದವರಿಗೂ ನ್ಯಾಯ ಒದಗಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.