ADVERTISEMENT

ಸೋಮವಾರ 17–6–1968

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 18:40 IST
Last Updated 16 ಜೂನ್ 2018, 18:40 IST
ಡಾ. ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಹಂತಕನೆಂದು ಆರೋಪಿಸಲಾಗಿರುವ ಜೆಮ್ಸ್‌ ಆರ್ಲ್‌ ರೇನನ್ನು ಬ್ರಿಕ್ಸ್‌ಟನ್‌ ಕಾರಾಗೃಹಕ್ಕೆ ಒಯ್ಯುತ್ತಿರುವ ಪೊಲೀಸ್‌ ವಾಹನ ಲಂಡನಿನಲ್ಲಿ ವೆಸ್ಟ್‌ಮಿನ್‌ಸ್ಟರ್‌ ಸೇತುವೆ ದಾಟುತ್ತಿದೆ.
ಡಾ. ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಹಂತಕನೆಂದು ಆರೋಪಿಸಲಾಗಿರುವ ಜೆಮ್ಸ್‌ ಆರ್ಲ್‌ ರೇನನ್ನು ಬ್ರಿಕ್ಸ್‌ಟನ್‌ ಕಾರಾಗೃಹಕ್ಕೆ ಒಯ್ಯುತ್ತಿರುವ ಪೊಲೀಸ್‌ ವಾಹನ ಲಂಡನಿನಲ್ಲಿ ವೆಸ್ಟ್‌ಮಿನ್‌ಸ್ಟರ್‌ ಸೇತುವೆ ದಾಟುತ್ತಿದೆ.   

ಮಂಗಳೂರು ಬಂದರು ಅಭಿವೃದ್ಧಿಗೆ 24ಕೋಟಿ ರೂ: ಕೇಂದ್ರದ ಸಮ್ಮತಿ

ನವದೆಹಲಿ, ಜೂ. 16– ಬೃಹತ್‌ ರೇವುಗಳಿಗೆ ಸೌಲಭ್ಯ ಕೊಡಬೇಕೆಂಬ ನೀತಿಯನ್ನನುಸರಿಸಿ ಮಂಗಳೂರು ಬಂದರು ಅಭಿವೃದ್ಧಿಗೆ 24– 30 ಕೋಟಿ ರೂಪಾಯಿಗಳ ವೆಚ್ಚದ ಅಂದಾಜಿಗೆ ಕೇಂದ್ರ ಸಂಪುಟ ಸಮ್ಮತಿಸಿದೆ.

**

ADVERTISEMENT

ಬಲವರ್ಧನೆಗೆ ಗುಪ್ತ ನಾಗಾಗಳ ಯತ್ನ: ಶಾಂತಿ ತಂಡದ ಟೀಕೆ

ಕೋಹಿಮ, ಜೂ. 16– ಕಾಲಕ್ರಮದಲ್ಲಿ ಬಲಪ್ರದರ್ಶನ ನಡೆಸಲು ಗುಪ್ತ ನಾಗಾಗಳು ಸೈನಿಕವಾಗಿ ಸುಸಜ್ಜಿತರಾಗಲು ನಾಗಾಲ್ಯಾಂಡಿನ ಕದನವಿರಾಮ ಅವಧಿಯನ್ನು ಉಪಯೋಗಿಸಿಕೊಂಡರೆ, ಶಾಂತಿಯ ಅರ್ಥ ನಿರರ್ಥಕವಾಗುತ್ತದೆ ಎಂದು ನಾಗಾಲ್ಯಾಂಡ್‌ ಶಾಂತಿ ವೀಕ್ಷಕರ ತಂಡ ಹೇಳಿದೆ.

**

ಚೀನೀ ದಾಳಿ: ಅಪರಾಧಿ ಯಾರು?

ನವದೆಹಲಿ, ಜೂ. 16– ‘ಚೀನೀಯರು 1962ರಲ್ಲಿ ಭಾರತದ ಮೇಲೆ ದಾಳಿ ನಡೆಸಿದ್ದರ ಪರಿಣಾಮವಾಗಿ ಭಾರತದಲ್ಲಿ ಪ್ರಜಾಸತ್ತೆ ಉಳಿಯಿತು’

ಈಗ ತಾನು ಪ್ರಕಟಿಸಿರುವ ‘ದಿ ಗಿಲ್ಟಿ ಮೆನ್‌ ಆಫ್‌ 1962’ (1962ರ ಅಪರಾಧಿಗಳು) ಎಂಬ ಪುಸ್ತಕದಿಂದ ಈ ಅಂಶ ವ್ಯಕ್ತಪಟ್ಟಿದೆ.

ಭಾರತದ ಅಯೂಬ್‌ ಖಾನ್‌ ಆಗಲಿದ್ದ ಹಾಗೂ ಭಾರತದ ಮಾವೋ ತ್ಸೆ ತುಂಗ್‌ ಆಗಲು ಆಸೆ– ಆಕಾಂಕ್ಷೆ ಹೊಂದಿದ್ದ ಇಬ್ಬರು ವ್ಯಕ್ತಿಗಳ ಉನ್ನತ ಜೀವನ ಗತಿಯನ್ನು ಈ ಯುದ್ಧ ಹೇಗೆ ವ್ಯರ್ಥಗೊಳಿಸಿತು ಎಂಬುದನ್ನು ಆ ಪುಸ್ತಕ ತಿಳಿಸಿದೆ.

**

ಸೈನಿಕರಿಗೆ ಗೆರಿಲ್ಲಾ ಯುದ್ಧ ತರಬೇತಿ: ಗುಪ್ತನಾಗಾ ಹಂಚಿಕೆ ಬಯಲು

ಕೋಹಿಮ, ಜೂ. 16– ನಾಲ್ಕುಸಾವಿರ ಮಂದಿ ಸೈನಿಕರನ್ನು ಗೆರಿಲ್ಲಾ ಮಾದರಿ ಯುದ್ಧದಲ್ಲಿ ತರಬೇತಿಗೊಳಿಸುವ ಗುಪ್ತ ನಾಗಾಗಳ ಯೋಜನೆ, ಬಂಡುಕೋರ ನಾಗಾಗಳು ಹಾಗೂ ಭದ್ರತಾಪಡೆಗಳ ನಡುವೆ ಇತ್ತೀಚೆಗೆ ನಡೆದ ಘರ್ಷಣೆಯಿಂದ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.