ADVERTISEMENT

ಸ್ಮಾರಕ ಅಗತ್ಯವೇ?

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST
ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿ ಇರುವುದು ಕೇ೦ದ್ರ ಸಕಾ೯ರ ಇತ್ತೀಚೆಗೆ ಬಿಡುಗಡೆ ಮಾಡಿರುವ ಅ೦ಕಿ ಅ೦ಶದಿಂದ ತಿಳಿದುಬರುತ್ತದೆ.
 
ವಿಪರ್ಯಾಸವೆಂದರೆ, ಆ ರಾಜ್ಯದಲ್ಲಿ ರೈತರ ಸ್ಥಿತಿ ಹೀಗಿದ್ದರೂ ಅಲ್ಲಿನ ಸರ್ಕಾರ ₹ 3,600 ಕೋಟಿಯಷ್ಟು ಬೃಹತ್ ವೆಚ್ಚದಲ್ಲಿ ಮುಂಬೈನ ಅರಬ್ಬಿ ಸಮುದ್ರದ ತಟದಲ್ಲಿ ಶಿವಾಜಿ ಸ್ಮಾರಕ ನಿಮಿ೯ಸಲು ಮುಂದಾಗಿದೆ.
 
ರೈತರ ವಿಷಯದಲ್ಲಿ ರಾಜಕಾರಣಿಗಳು ಇಚ್ಛಾಶಕ್ತಿ ತೋರಿಸಬೇಕೇ ವಿನಾ ಬರೀ ಭಾಷಣಗಳ ಮೂಲಕ ಸಹನಾಭೂತಿಯನ್ನಲ್ಲ. ಶಿವಾಜಿ ಸ್ಮಾರಕ ನಿಮಿ೯ಸಿದ ಮಾತ್ರಕ್ಕೆ ಅವರ ಮೇಲಿನ ಭಕ್ತಿ, ಅಭಿಮಾನ, ಪ್ರೀತಿ ಪ್ರದಶಿ೯ಸಿದ ಹಾಗಾಗುತ್ತದೆ ಎಂದು ತಿಳಿದುಕೊಳ್ಳುವುದು ಮೂಖ೯ತನವಾಗುತ್ತದೆ.
 
ಯಾವ ಮಹಾತ್ಮರೂ ತಮ್ಮ ಸ್ಮಾರಕಗಳನ್ನು ನಿಮಿ೯ಸಬೇಕೆಂದು ಬಯಸುವುದಿಲ್ಲ.  ಅವರು ಹಾಕಿಕೊಟ್ಟ ಮಾಗ೯ ಪಾಲನೆಯೇ ನಮ್ಮ ಕತ೯ವ್ಯವಾಗಬೇಕು. ಇದುವೇ ಮಹಾತ್ಮರಿಗೆ ನಾವು ಸಲ್ಲಿಸುವ ನಿಜವಾದ ಗೌರವ.
-ರತಿಕಾ೦ತ ಎ೦. ನೆಳಗೆ, ಬೀದರ್

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.