ADVERTISEMENT

ಸ್ವಾಗತಾರ್ಹ ಕ್ರಮ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST

ಈ ಶೈಕ್ಷಣಿಕ ವರ್ಷದಿಂದ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಪಠ್ಯಪುಸ್ತಕಗಳನ್ನು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡುವ ಸರ್ಕಾರದ ಕ್ರಮ ಸ್ವಾಗತಾರ್ಹ.

ಹಿಂದೆ ಇದೇ ವ್ಯವಸ್ಥೆ ಜಾರಿಯಲ್ಲಿತ್ತು. ಕಳೆದ ಮೂರು– ನಾಲ್ಕು ವರ್ಷಗಳಿಂದ ಇಲಾಖೆಯ ಮೂಲಕ ಶಾಲೆಯವರು ಪುಸ್ತಕ ಖರೀದಿಸಿ ವಿದ್ಯಾರ್ಥಿಗಳಿಗೆ ಸರಬರಾಜು ಮಾಡುವಂತಹ ವ್ಯವಸ್ಥೆ ಜಾರಿಯಲ್ಲಿ ಇತ್ತು.

ಇದನ್ನು ಬಂಡವಾಳವಾಗಿಸಿಕೊಂಡು ಕೆಲವು ಖಾಸಗಿ ಶಾಲೆಗಳು, ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಂಡು ಪಠ್ಯಪುಸ್ತಕಗಳ ಜೊತೆಗೆ ಬ್ಯಾಗ್, ನೋಟ್‌ಬುಕ್, ಶೂ ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದವು. ಶಾಲೆಯಿಂದಲೇ ಇವೆಲ್ಲವನ್ನೂ ಖರೀದಿಸಬೇಕು ಎಂದು ಒತ್ತಡ ಹೇರುತ್ತಿದ್ದವು.

ADVERTISEMENT

ಮತ್ತೆ ಹಳೆಯ ಪದ್ಧತಿ ಜಾರಿ ಮಾಡಿದ್ದರಿಂದ ಪಾಲಕರು ನಿರಾಳರಾಗಿದ್ದಾರೆ. ಜೊತೆಗೆ ಯಾವಾಗ ಬೇಕಾದರೂ ಪುಸ್ತಕ ಖರೀದಿ ಸಾಧ್ಯವಾಗುತ್ತದೆ.
-ಜಯಪ್ರಕಾಶ್ ಬಿರಾದಾರ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.