ADVERTISEMENT

ಸ್ವಾಗತಾರ್ಹ ನಡೆ

ವೆಂಕಟೇಶ ಬಂಡೇರ, ಕೂಸನೂರ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪಠ್ಯಕ್ರಮವನ್ನು ಕಡಿಮೆ ಮಾಡಲು ಮುಂದಾಗಿರುವ ಎನ್.ಸಿ.ಆರ್‌.ಟಿ. ಕ್ರಮ ಶ್ಲಾಘನೀಯ.

ಅವೈಜ್ಞಾನಿಕವಾಗಿರುವ ಈಗಿನ ಪಠ್ಯಕ್ರಮವು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಂತೂ ಪಠ್ಯಕ್ರಮದ ಭಾರದಿಂದ ನಲುಗುತ್ತಿರುವುದು ಸರ್ಕಾರಕ್ಕೆ ತಿಳಿದಿರುವ ಸಂಗತಿ.

ಪ್ರಾಥಮಿಕ ಹಂತದಲ್ಲಿ ನಲಿ ಕಲಿ ಯೋಜನೆಯಡಿ ಕಲಿತು, ಪ್ರೌಢಶಾಲೆಗೆ ಹೆಜ್ಜೆಯಿಡುವ ಮಕ್ಕಳಲ್ಲಿ ಇಲ್ಲಿನ ಪಠ್ಯ ಪುಸ್ತಕಗಳು ದಿಗಿಲು ಮೂಡಿಸುತ್ತವೆ. ‘ಮಗುವಿನ ಕಲಿಕೆ ಅದರ ಜೀವನಕ್ಕೆ ಅನುಕೂಲ ಆಗುವಂತಿರಬೇಕು’ ಎಂಬುದು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಆಶಯ. ಸದ್ಯದ ಸ್ಥಿತಿ ಇದಕ್ಕೆ ವಿರುದ್ಧವಾಗಿದ್ದು, ಕೇವಲ ಅಂಕ ಗಳಿಕೆಗೆ ಸೀಮಿತವಾಗಿ ಹೋಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡಿದ್ದು ಸಂತಸದ ವಿಚಾರ.

ADVERTISEMENT

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಶಿಕ್ಷಕರ ಅರ್ಹತೆ ಬಗ್ಗ ಈಚೆಗೆ ಮಾತನಾಡಿದ್ದಾರೆ. ಶಿಕ್ಷಕರನ್ನು ಟೀಕಿಸುವ ಮುನ್ನ, ಅವರನ್ನು ಆಯ್ಕೆ ಮಾಡಿದ್ದು ಮಕ್ಕಳಿಗೆ ಶಿಕ್ಷಣ ಕೊಡಲು ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ನೂರೆಂಟು ಯೋಜನೆಗಳ ಅನುಷ್ಠಾನದ ಜವಾಬ್ದಾರಿಯಿಂದ ಅವರನ್ನು ಮುಕ್ತಗೊಳಿಸಿ, ಶೈಕ್ಷಣಿಕ ಕೆಲಸದಲ್ಲಿ ತೊಡಗಿಸಿಕೊಳ್ಳಲು ಬಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.