ADVERTISEMENT

ಹಣ ನೀಡುವವರಾರು?

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 19:30 IST
Last Updated 26 ಜುಲೈ 2016, 19:30 IST

ಸರ್ಕಾರ ಮತ್ತು ಸಾರಿಗೆ ನಿಗಮಗಳ ನೌಕರರ ಹಗ್ಗಜಗ್ಗಾಟದಿಂದ ಉಂಟಾಗಿರುವ ಬಸ್‌ ಸಂಚಾರ ವ್ಯತ್ಯಯದಿಂದ ಜನ ಹೆಚ್ಚಿನ ಹಣ ತೆತ್ತು ಕರ್ತವ್ಯಕ್ಕೆ ಹೋಗಿ ಬರಬೇಕಾಗಿದೆ.

ನಾವು ಬಿಎಂಟಿಸಿಗೆ ತಿಂಗಳ ಪ್ರಾರಂಭದಲ್ಲಿ ಹಣ ನೀಡಿ ಪಾಸ್‌ ಖರೀದಿಸಿರುತ್ತೇವೆ. ಆದರೆ ಬಿಎಂಟಿಸಿ  ಎರಡು ದಿನಗಳಿಂದ ಸಾರಿಗೆ ಸೇವೆಯನ್ನು ನೀಡಿಲ್ಲ. ಹಾಗಾದರೆ ಈ ಎರಡು ದಿನಗಳ ಹಣವನ್ನು ನಮಗೆ ನೀಡುವವರಾರು? ಒಬ್ಬ ಸಾಮಾನ್ಯ ಮನುಷ್ಯ ಇಂತಹ ಹೆಚ್ಚುವರಿ ಹೊರೆಗಳನ್ನು ಹೇಗೆ ನಿರ್ವಹಿಸುವುದು?

-ಪ್ರದೀಪ್ ಜೆ.ಎಲ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.