ADVERTISEMENT

ಹಿಂದಿಯೂ ಇರಲಿ...

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST

‘ಹಿಂದಿ ಹೇರಿಕೆ’ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಕೇಳಿಬರುತ್ತಲೇ ಇವೆ. ಭಾರತದಲ್ಲಿ ಇಂದು ಹಿಂದಿ, ಇಂಗ್ಲಿಷ್‌ ಭಾಷೆಗಳಷ್ಟೇ  ‘ಅನಿವಾರ್ಯ’ವಾಗಿವೆ. ರೈಲು ನಿಲ್ದಾಣ, ಅಂಚೆ ಕಚೇರಿ, ವಿಮಾನ ನಿಲ್ದಾಣ ಮುಂತಾಗಿ ಕೇಂದ್ರ ಸರ್ಕಾರದ ಕಚೇರಿಗಳು ತ್ರಿಭಾಷಾ ಸೂತ್ರಕ್ಕೆ ಒಳಪಟ್ಟಿವೆ. ಹಾಗೆಯೇ ಮೆಟ್ರೊದಲ್ಲೂ ಹಿಂದಿಗೆ ಸ್ಥಾನ ನೀಡಲಾಗಿದೆ. ಬೇರೆ ಎಲ್ಲೂ ಇಲ್ಲದ ತಕರಾರು ಮೆಟ್ರೊಗೆ ಮಾತ್ರ ಏಕೆ?

ರಾಜ್ಯ ಮತ್ತು ಕೇಂದ್ರಾಡಳಿತಕ್ಕೆ ಒಳಪಟ್ಟ ಶಾಲೆಗಳಲ್ಲಿ ಕಲಿಯುವ ಮಕ್ಕಳು ಇಂದು ಹಿಂದಿ ಕಲಿಯುತ್ತಿದ್ದಾರೆ. ‘ಕನ್ನಡ’ ನಮ್ಮ ಹೃದಯದ ಭಾಷೆಯಾದರೆ ಹಿಂದಿ ಮತ್ತು ಇಂಗ್ಲಿಷ್‌ ಹೊಟ್ಟೆಪಾಡಿನ ಭಾಷೆಗಳಾಗಿವೆ. ಅದಕ್ಕೇ ಹಿಂದಿ ಮತ್ತು ಇಂಗ್ಲಿಷ್‌ ‘ಅನಿವಾರ್ಯ’ದ ಭಾಷೆಗಳು ಎಂದಿದ್ದು.

ಭಾರತದ ಏಕೀಕರಣದ ಸಂದರ್ಭದಲ್ಲಿ ಗಾಂಧಿ ಮತ್ತು ಪುರುಷೋತ್ತಮ್ ಟಂಡನ್ ದಾಸ್‌ ಅವರು ಚೆನ್ನಾಗಿ ಯೋಚಿಸಿಯೇ  ದೇಶದಲ್ಲಿ ಹಿಂದಿಪ್ರಚಾರ ಮಾಡಬೇಕು ಎಂದು ತೀರ್ಮಾನಿಸಿ, ಅದನ್ನು ತೀವ್ರವಾಗಿ ವಿರೋಧಿಸಿದ್ದ ರಾಜ್ಯ ತಮಿಳುನಾಡಿನಲ್ಲಿ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ಸ್ಥಾಪಿಸಿದರು.

ADVERTISEMENT

ಸಿನಿಮಾ, ಕಲೆ, ಗಾಯನ, ಇನ್ನಿತರ ಮನೋರಂಜನೆಗೆ ಹಿಂದಿ ಬೇಕು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಂದು ಹಿಂದಿ ನಾಮಫಲಕ ಹಾಕಿದರೆ ತಕರಾರು ಎಂದರೆ ಇದು ಹಾಸ್ಯಾಸ್ಪದ ಎನಿಸುವುದಿಲ್ಲವೇ? ರಾಜ್ಯದಲ್ಲಿ ಮೊದಲ ಸ್ಥಾನ ಕನ್ನಡಕ್ಕೆ ಇರುವಾಗ ಹಿಂದಿ ಬಗ್ಗೆ ತಕರಾರು ಏಕೆ?  ಹಿಂದುಸ್ತಾನದಲ್ಲಿ ಹಿಂದಿ ಇರಲಿ, ಆದರೆ ರಾಜ್ಯದಲ್ಲಿ ಕನ್ನಡವೇ ಅಗ್ರಗಣ್ಯ...
–ಪ್ರದೀಪ್ ಎನ್., ಚೆಲುವರಸನಕೊಪ್ಪಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.