ADVERTISEMENT

ಹಿಂದಿ ‘ಬಳಕೆ’ ತಪ್ಪಲ್ಲ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST

ಭಾರತದಲ್ಲಿ ಧರ್ಮಗಳಂತೆ ಭಾಷೆಯಲ್ಲೂ ವೈವಿಧ್ಯ ಇದೆ. ಭಾಷೆಗಳಿಗೆ ಅವುಗಳದ್ದೇ ಸಾಂಸ್ಕೃತಿಕ, ಆಡಳಿತಾತ್ಮಕ ಸ್ಥಾನಮಾನಗಳಿವೆ. ಇಲ್ಲಿ ಭಾಷೆಯ ‘ಬಳಕೆ’ ಮತ್ತು ‘ಹೇರಿಕೆಯ’ ನಡುವೆ ವ್ಯತ್ಯಾಸವಿದೆ.

ಭಾಷೆ ಮಾಹಿತಿ ವಿನಿಮಯದ ಮಾಧ್ಯಮವಾಗಬೇಕು, ಒಂದು ಭಾಷೆಯ ಬಳಕೆ ಸ್ಥಳೀಯ ಭಾಷೆಯ ಅವನತಿಗೆ ಕಾರಣವಾಗುವಂತಿದ್ದರೆ ಅದು ‘ಹೇರಿಕೆ’ಯೇ ಸರಿ.

ಭಾರತದ ನಾಗರಿಕರಾಗಿ ‘ವಿವಿಧತೆಯಲ್ಲಿ ಏಕತೆ’ಯನ್ನು ತೋರುವ ನಾವು ಹಿಂದಿ ಭಾಷೆಯನ್ನು ನಮ್ಮ ಸ್ಥಳೀಯ ಭಾಷೆಯ ಗೌರವಕ್ಕೆ ಧಕ್ಕೆಯಾಗದಂತೆ ಮತ್ತು ಇನ್ನೊಬ್ಬರ ಅನುಕೂಲಕ್ಕಾಗಿ ಬಳಸುವುದರಲ್ಲಿ ತಪ್ಪೇನಿದೆ?
-ಯೂನುಸ್ ಸಾರವಾನ, ಮುಧೋಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.