ADVERTISEMENT

ಹುಣ್ಣು ಬೆಳೆಯುತ್ತಿದೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಅಕ್ಟೋಬರ್ 2015, 19:34 IST
Last Updated 5 ಅಕ್ಟೋಬರ್ 2015, 19:34 IST

ನಾವು ಚಿಕ್ಕವರಿದ್ದಾಗ ಪಟ್ಟಣಗಳಲ್ಲಿಯೇ ಹೆಚ್ಚಾಗಿ ಕೋಮು ಗಲಭೆಗಳು ಸಂಭವಿಸುತ್ತಿದ್ದುದನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೆವು. ಆದರೆ ಈಗ ಈ ‘ಹುಣ್ಣು’ ಹಳ್ಳಿಗಳಿಗೂ ವ್ಯಾಪಿಸಿರುವುದಕ್ಕೆ ಕಾರಣ ಏನು ಎಂಬ ಬಗ್ಗೆ ಆಲೋಚಿಸಬೇಕಾಗಿದೆ.

ಸಮಾಜಘಾತುಕ ಶಕ್ತಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೋಮು ಗಲಭೆ ಸೃಷ್ಟಿಯಾಗುವಂತೆ ಕಂಡರೂ ರಾಜಕೀಯದ ಮಂದಿ ಮೈ ಕಾಯಿಸಿಕೊಳ್ಳಲು ಸಣ್ಣ-ಪುಟ್ಟ ಜಗಳಗಳನ್ನೂ ಕೋಮು ಗಲಭೆಯನ್ನಾಗಿ ಮಾರ್ಪಡಿಸುತ್ತಿದ್ದಾರೇನೋ ಎನಿಸುತ್ತದೆ. ಪೊಲೀಸ್‌ ಇಲಾಖೆಯ ಲೋಪವೂ ಇರಬಹುದೇನೊ. ಆದರೆ ಗಲಭೆ ವ್ಯಾಪಿಸಲು ಮುಖ್ಯ ಕಾರಣ ವದಂತಿಗಳು ಎಂಬುದನ್ನು ಅಲ್ಲಗಳೆಯಲಾಗದು.

ಮನುಷ್ಯ- ಮನುಷ್ಯರ ನಡುವೆ ಕಂದಕ ನಿರ್ಮಿಸುತ್ತಿರುವ ಇದು ಭವಿಷ್ಯದಲ್ಲಿ ಇನ್ನೂ ಅಪಾಯಕಾರಿಯಾಗಬಹುದು. ನಮ್ಮ ಧರ್ಮವೇ ಶ್ರೇಷ್ಠವಾದದ್ದು ಎನ್ನುವ ಭಾವನೆಯನ್ನು ಪುಟ್ಟ ಮಕ್ಕಳಿಗೆ ಬಿತ್ತುವ ಎಲ್ಲ ಧರ್ಮೀಯರೂ ಮೊದಲು ಮಾನವೀಯತೆಯೇ ಶ್ರೇಷ್ಠ ಎಂಬುದನ್ನು ಬಿತ್ತಿದಾಗ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಈ ‘ಹುಣ್ಣು’ ಗೆದ್ದು ಬೀಗಬಹುದೇನೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.