ADVERTISEMENT

‘ಹಸಿರುಯುಗ’ ಬೇಕು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ಆಗಸ್ಟ್ 2015, 19:59 IST
Last Updated 28 ಆಗಸ್ಟ್ 2015, 19:59 IST

ವ್ಯಾಪಾರಿ ಮನೋಭಾವದಿಂದ ದೂರವಾದ, ಶುದ್ಧ ಸಾಮಾಜಿಕ ಕಳಕಳಿಯ ‘ಅಂತರಾಳ’– ‘ಬರದ ಬರೆ’ (ಪ್ರ.ವಾ., ಆ. 22) ಮೆಚ್ಚುಗೆಯಾಯಿತು.

ಐತಿಹಾಸಿಕವಾಗಿ ನೋಡಿದರೆ ನಿಸರ್ಗ ಮುನಿದಾಗಲೆಲ್ಲ ಮಾನವ ಸಂಶೋಧನೆಗಳನ್ನು ಕೈಗೊಂಡು ಮುನ್ನಡೆ ಸಾಧಿಸಿದ್ದಾನೆ. ಈ ಕಾರಣದಿಂದಲೆ ನಾವು ಶಿಲಾಯುಗ, ತಾಮ್ರಯುಗ... ಕೈಗಾರಿಕಾ ಕ್ರಾಂತಿ ಇತ್ಯಾದಿಗಳನ್ನು ನೋಡುತ್ತೇವೆ. ಈ ದೃಷ್ಟಿಯಿಂದ ನೋಡಿದಾಗ ನಮ್ಮೆಲ್ಲ ಬುದ್ಧಿಶಕ್ತಿಯನ್ನು ಬಳಸಿ ನಾವು ಈಗ ‘ಹಸಿರುಯುಗಕ್ಕೆ’ ಅಡಿಪಾಯ ಹಾಕಬೇಕಾಗಿದೆ.

ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿ ಗ್ರಾಮಗಳ ನಿರ್ಮಾಣ ನಮ್ಮ ಗುರಿಯಾದರೆ ಬರವನ್ನು ಎದುರಿಸಿ ಗೆಲ್ಲಬಹುದು. ಇದಕ್ಕೆ ಬೇಕಾಗಿರುವುದು ರಾಜ್ಯಕ್ಕೊಂದು ಗ್ರಾಮೀಣ ವಿಶ್ವವಿದ್ಯಾಲಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.