ADVERTISEMENT

32 ಕೋಟಿ...

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST

ಇದೀಗ ಪರ್ಯಾಯದ ಹೊಣೆ ಹೊರಲಿರುವ ಉಡುಪಿಯ ಸ್ವಾಮಿಗಳು ತಮ್ಮ ಪರ್ಯಾಯದ ಅವಧಿಯಲ್ಲಿ ಕೃಷ್ಣನ ದೇವಾಲಯಕ್ಕೆ ಚಿನ್ನದ ಹೊದಿಕೆ ಹೊದಿಸುವ ಸಂಕಲ್ಪ ಮಾಡಿ, ಅದಕ್ಕೆ ₹ 32 ಕೋಟಿ ವೆಚ್ಚ ಮಾಡಲು ಹೊರಟಿರುವುದನ್ನು ಓದಿ ಅರಗಿಸಿಕೊಳ್ಳುತ್ತಿದ್ದಾಗಲೇ ಶತಮಾನೋತ್ಸವ ಆಚರಿಸಕೊಳ್ಳಬೇಕಿರುವ ಮಾಗಡಿ ತಾಲ್ಲೂಕಿನ ಸರ್ಕಾರಿ ಶಾಲೆಯೊಂದು ಮುರಿದು ಬೀಳುವ ಸ್ಥಿತಿ ತಲುಪಿದೆ ಎಂಬ ವಿದ್ರಾವಕ ವರದಿ ಓದಿ ಆ ₹ 32 ಕೋಟಿಯನ್ನು ಶಾಲಾ ಜೀರ್ಣೋದ್ಧಾರಕ ಕಾರ್ಯಗಳಂತಹ ಸಮಾಜಮುಖಿ ಕೆಲಸಗಳಿಗೆ ಬಳಸಿದರೆ ಕೃಷ್ಣ ಪರಮಾತ್ಮನ ಆಕ್ಷೇಪಣೆ ಇರಲಾರದು ಎಂದೆನಿಸಿತು.

ನೀವೇನಂತೀರಿ?

–ಆನಂದ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.