ADVERTISEMENT

ಅಲ್ಪಸಂಖ್ಯಾತರು ಯಾರು?

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST

ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಭಾಷಣ– ಬರಹಗಳಲ್ಲಿ ಯಾರನ್ನು ‘ಅಲ್ಪಸಂಖ್ಯಾತರು’ ಎಂದು ಕರೆಯುತ್ತಾರೆ ಎಂಬುದು ಅಸ್ಪಷ್ಟ. ರಾಜಕಾರಣಿಗಳು ಹೇಳುವ ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಎಂದು ಜನರು ಭಾವಿಸುತ್ತಿದ್ದಾರೆ. ಅದೇ ನಿಜವೆನ್ನುವಂತೆ ರಾಜಕಾರಣಿಗಳು ಸಹ ವರ್ತಿಸುತ್ತಿದ್ದಾರೆ. ಅನುಕಂಪ, ಸಹಾನುಭೂತಿ, ಕರುಣೆ, ಸಹಾಯ ಹಸ್ತ, ಸಕಲ ಭಾಗ್ಯಗಳು- ಇನ್ನೂ ಏನಾದರೂ ಇದ್ದರೆ- ಇವೆಲ್ಲಕ್ಕೂ ಮುಸ್ಲಿಮರು ಅರ್ಹರು ಎಂದು ವಿವರಿಸಲು ಸ್ಪರ್ಧಿಸುತ್ತಿದ್ದಾರೆ.

ನಮ್ಮ ದೇಶದಲ್ಲಿ ಪಾರ್ಸಿ ಪ್ರಜೆಗಳು ‘ಅತ್ಯಲ್ಪ’ ಸಂಖ್ಯಾತರಲ್ಲವೇ? ಅವರ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ದೇಶದಲ್ಲಿ ಇಂಥ ಇನ್ನೂ ಹಲವು ಅಲ್ಪಸಂಖ್ಯಾತ ಸಮುದಾಯಗಳಿವೆ.

ರಾಜಕಾರಣಿಗಳು ವೋಟಿಗೋಸ್ಕರ ಹೀಗೆ ಮುದ್ದು ಮಾಡುವ ರೀತಿಯಿಂದ ಇತರ ಜಾತಿಗಳ ಜನರು ಸಂಶಯಪೀಡಿತರಾಗಿ ಭಯದ ನೆರಳಿನಲ್ಲಿರುವಂತೆ ಮಾಡಿರುವುದರಿಂದ, ಬೇರೆ ಬೇರೆ ಸಮುದಾಯಗಳೊಳಗೆ ದ್ವೇಷಭಾವ ಮೂಡುತ್ತಿದೆ. ಅನೇಕ ಅಪರಾಧ ಕೃತ್ಯಗಳಿಗೂ ಇದು ಕಾರಣವಾಗುತ್ತದೆ.

ADVERTISEMENT

–ಎಂ. ರಾಜಾನಾಯಕ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.