ADVERTISEMENT

ಪ್ರಯೋಗಿಸುವ ಮುನ್ನ...

ಪೂರ್ಣಿಮಾ ಮೂರ್ತಿ
Published 13 ಮಾರ್ಚ್ 2019, 18:46 IST
Last Updated 13 ಮಾರ್ಚ್ 2019, 18:46 IST

ಉತ್ತರಪ್ರದೇಶದ ಗೋರಖಪುರದಲ್ಲಿ ಅವಿವಾಹಿತ ಮಹಿಳೆಯೊಬ್ಬರು ಯುಟ್ಯೂಬ್ ನೋಡಿಕೊಂಡು ಸ್ವತಃ ಹೆರಿಗೆ ಮಾಡಿಕೊಳ್ಳಲು ಯತ್ನಿಸಿ, ನವಜಾತ ಶಿಶುವಿನೊಟ್ಟಿಗೆ ಸಾವನ್ನಪ್ಪಿರುವುದು ವಿಪರ್ಯಾಸ (ಪ್ರ.ವಾ.,ಮಾರ್ಚ್‌13).

ಹೀಗೆ ಜಾಲತಾಣಗಳಲ್ಲಿ ಅಭಿವ್ಯಕ್ತಿಗೊಂಡ ವಿಷಯಗಳ ಜಾಡು ಹಿಡಿದು ಪ್ರಯೋಗಿಸುವ ಮುನ್ನ ಅವನ್ನು ವಿಶ್ಲೇಷಣೆಗೆ ಒಳಪಡಿಸಬೇಕು. ಅವುಗಳ ಸಾಧಕ– ಬಾಧಕಗಳ ಬಗ್ಗೆ ಯೋಚಿಸಬೇಕು.ಹಾಗೆಯೇ ಗಿನ್ನಿಸ್ ದಾಖಲೆಗಾಗಿ ಕೆಲವರು ದುಸ್ಸಾಹಸಕ್ಕೆ ಕೈ ಹಾಕುತ್ತಲೇ ಇರುತ್ತಾರೆ.

ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವಂತಹ ಸಾಹಸ–ಪ್ರಯೋಗಗಳನ್ನು ಮಾಡುವುದು ಸರಿಯಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.