ADVERTISEMENT

ಕೇಳುವವರು ಯಾರು?

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 16:55 IST
Last Updated 3 ಜುಲೈ 2018, 16:55 IST

ರಾಜ್ಯದ ಜನರು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೊಸ ಸರ್ಕಾರ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಆದರೆ ಸರ್ಕಾರ ಮತ್ತು ಒಟ್ಟಾರೆ ವ್ಯವಸ್ಥೆಗೆ ‘ಸಾಲ ಮನ್ನಾ’ ಬಿಟ್ಟರೆ ಬೇರೆ ಯಾವ ಸಮಸ್ಯೆಯೂ ಗೋಚರಿಸಿದಂತಿಲ್ಲ.

‘ಸಾಲ ಮನ್ನಾ’ ಎಂಬುದು ಒಂದು ಸಲದ ಪ್ರಕ್ರಿಯೆ ಅಲ್ಲ. ವೋಟ್‌ ಬ್ಯಾಂಕ್‌ ನಿರ್ಮಿಸುವ ಶಕ್ತಿ ಇದಕ್ಕೆ ಇರುವುದರಿಂದ, ಮುಂದೆಯೂ ಎಲ್ಲಾ ಪಕ್ಷಗಳ ಪ್ರಣಾಳಿ
ಕೆಗಳಲ್ಲಿ ಸಾಲ ಮನ್ನಾ ಅಂಶ ಮುಖ್ಯವಾಗಿ ಗೋಚರಿಸಬಹುದು. ಈಗಂತೂ ಸಾಲ ಮನ್ನಾ ವಿಚಾರ ಎಷ್ಟು ಮಹತ್ವ ಪಡೆದುಕೊಂಡಿದೆ ಎಂದರೆ ರಾಜ್ಯದ ಬೇರೆ ಯಾವ ಸಮಸ್ಯೆಯ ಬಗ್ಗೆಯೂ ಎಲ್ಲೂ ಚರ್ಚೆ ಆಗುತ್ತಿಲ್ಲ.

ರಾಜ್ಯದಲ್ಲಿ ರೈತರಂತೆಯೇ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು, ಚಿಕ್ಕ ಪುಟ್ಟ ವ್ಯಾಪಾರಿಗಳು, ಬೆಸ್ತರು, ಬೇಡರು... ತಮ್ಮ ತಮ್ಮ ಉದ್ಯೋಗದಲ್ಲಿ ಇದ್ದು, ಇವರಲ್ಲೂ ಅನೇಕರು ಸಾಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌, ವಾಯು ಮಾಲಿನ್ಯ, ಕಸ ನಿರ್ವಹಣೆ, ಕೆರೆಗಳ ಒತ್ತುವರಿ... ಹೀಗೆ ಹತ್ತಾರು ಗಂಭೀರ ಸಮಸ್ಯೆಗಳಿವೆ. ಇವು ಯಾವುವೂ ಅಲಕ್ಷ್ಯ ಮಾಡುವ ವಿಚಾರಗಳಲ್ಲ.

ADVERTISEMENT

ರೈತರ ಮತಗಳ ಮೇಲೆ ಕಣ್ಣಿಟ್ಟು, ಬಜೆಟ್‌ನ ಕಾಲು ಭಾಗದಷ್ಟು ಹಣವನ್ನು ಸಾಲ ಮನ್ನಾಗೆ ಮೀಸಲಿಟ್ಟರೆ ಉಳಿದ ಯೋಜನೆಗಳ ಗತಿ ಏನು? ಜನರ ಇತರ ಸಮಸ್ಯೆಗಳ ಬಗ್ಗೆ ಕೇಳುವವರು ಯಾರು? ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಸಮಯಸಾಧಕತನ ರಾಜಕೀಯ ಜಾಣ್ಮೆಯೇ?

ಸತ್ಯಬೋಧ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.