ADVERTISEMENT

ಒಂಚೂರು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2017, 5:59 IST
Last Updated 19 ಮಾರ್ಚ್ 2017, 5:59 IST
ಹಕ್ಕಿ ಪೀಕಲಾಟ
ಹಕ್ಕಿ ಪೀಕಲಾಟ   

ಹಕ್ಕಿ ಪೀಕಲಾಟ

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ವಿಯನ್ನಾದ ಮಹಿಳೆಯೊಬ್ಬರ ಮುದ್ದಿನ ಹಕ್ಕಿಯೊಂದಕ್ಕೆ ಸಂತ್ರಸ್ತರ ಶಿಬಿರದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಿಲ್ಲ. ಮಕಾವ್ ಎಂಬ ಹಕ್ಕಿಯು ಬಾಂಬ್ ದಾಳಿಯ ಸದ್ದನ್ನು ಅನುಕರಿಸತೊಡಗಿತ್ತು. ಆ ಹಕ್ಕಿಯೂ ಶಿಬಿರದಲ್ಲಿ ಇದ್ದರೆ ಪದೇ ಪದೇ ಹಾಗೆ ಶಬ್ದ ಮಾಡಿ ಜನರನ್ನು ಹೆದರಿಸುತ್ತದೆ ಎಂಬ ಕಾರಣಕ್ಕೆ ಸಂಬಂಧಪಟ್ಟವರು ಅದನ್ನು ಶಿಬಿರದಿಂದ ಹೊರಹಾಕಲು ನಿರ್ಧರಿಸಿದ್ದು.

**

ADVERTISEMENT

ಮೀನಿನಿಂದ ಮಾನವ!

ಭೂಮಿಯ ಮೇಲೆ ವಾಸ ಮಾಡುವ ಪೂರ್ವಜರು ಸಮುದ್ರದಿಂದ ಬಂದವರು. ಮನುಷ್ಯನಲ್ಲಿ ಇರುವ ಪ್ಯಾರಾಥೈರಾಯಿಡ್ ಗ್ರಂಥಿಯು ಮೀನುಗಳಿಗೆ ಇರುವ ಕಿವಿರು ಅಥವಾ ಜನ ಶ್ವಾಸಾಂಗದಿಂದ ಬೆಳವಣಿಗೆ ಹೊಂದಿದೆ ಎಂದು ಕೆಲವು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಗಂಟಲಿನ ಭಾಗದಲ್ಲಿರುವ ಪ್ಯಾರಾಥೈರಾಯಿಡ್ ಗ್ರಂಥಿಯು ದೇಹದ ಕ್ಯಾಲ್ಸಿಯಂ ಪ್ರಮಾಣವನ್ನು ನಿಗಾ ಮಾಡುತ್ತಿರುತ್ತದೆ. ಮೀನುಗಳಲ್ಲಿ ಇರುವ ಕಿವಿರುಗಳು ನೀರಿನಲ್ಲಿರುವ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಜೊತೆಗೆ ಉಸಿರಾಟ ಸುಗಮವಾಗಲೂ ಅವು ಸಹಾಯಕವಾಗಿವೆ.

**

ಬಿಸಿಯುಸಿರಿನ ಸದ್ಬಳಕೆ

ಸ್ಟಾಕ್‌ಹೋಮ್‌ನ ಸೆಂಟ್ರಲ್ ಸ್ಟೇಷನ್‌ನಲ್ಲಿ ದಿನವೂ ಎರಡೂವರೆ ಲಕ್ಷ ಜನ ಓಡಾಡುತ್ತಾರೆ. ಅವರು ಹೊರಹಾಕುವ ಬಿಸಿಗಾಳಿಯನ್ನು ಬಳಸಿ ಇನ್ನೊಂದು ಕಟ್ಟಡವನ್ನು ಬೆಚ್ಚಗಾಗಿಸುತ್ತಾರೆ. ಸ್ಟೇಷನ್‌ನಲ್ಲಿ ಜನ ಹೊರಸೂಸುವ ಬಿಸಿಗಾಳಿಯು ಗವಾಕ್ಷಿಯನ್ನು ಸೇರುತ್ತದೆ. ಅಲ್ಲಿಂದ ಅದನ್ನು ನೀರನ್ನು ಬಿಸಿಯಾಗಿಸಲು ಬಳಸುತ್ತಾರೆ. ಆ ನೀರನ್ನು ಪಕ್ಕದ ಇನ್ನೊಂದು ಕಟ್ಟಡಕ್ಕೆ  ಹಾಯಿಸಿ, ವಾತಾವರಣವನ್ನು ಬಿಸಿ ಮಾಡುವ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.