ADVERTISEMENT

ಕತೆ ಹೇಳಬ್ಯಾಡ್ರೀ...

ಡಿ.ಬಿ, ನಾಗರಾಜ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST

­ವಿಜಯಪುರ: ‘ಹುಡುಗ್ರ ನೀವು ಸಾಕಷ್ಟು ಓದಿದೋರು. ನಂಗೆ ಕತೆ ಹೇಳ್ಬೇಡಿ. ಬ್ರೀಫ್ ಮಾಡಿ ಸಾಕು. ಅರ್ಥವಾಗುತ್ತೆ. ದಶಕಗಳಿಂದ ನಾನು ಇದರಲ್ಲೇ ಪಳಗಿದವ...’
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.

‘ನೋಡ್ರಪ್ಪಾ ತಮ್ಮ... ಜನ ಮುಂಚಿನಂಗಿಲ್ಲ. ಎಲ್ರೂ ತುಂಬಾ ಸೆನ್ಸಿಟಿವ್‌ ಇದ್ದಾರೆ. ಎಲ್ಲರ ಕೈಯಲ್ಲೂ ಸ್ಮಾರ್ಟ್‌ ಫೋನ್‌ ಇವೆ. ಸ್ವಲ್ಪ ಹೆಚ್ಚುಕಮ್ಮಿ ಆಗುತ್ತಿದ್ದಂತೆ ರೆಕಾರ್ಡ್‌ ಮಾಡ್ತಾರೆ. ವಿಡಿಯೊ, ಫೋಟೊ ತೆಗೆದು ಕಳಿಸ್ತಾರೆ. ಜನ ಸಿಕ್ಕಾಪಟ್ಟೆ ಫಾಸ್ಟ್‌ ಆಗ್ಯಾರ. ನೀವೂ ಅಷ್ಟೇ ಹುಷಾರಾಗಿ ಕೆಲಸ ನಡೆಸಿ’ ಎನ್ನುತ್ತಿದ್ದಂತೆ ತಹಶೀಲ್ದಾರ್‌ಗಳು ಸೇರಿದಂತೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳೆಲ್ಲ ತಬ್ಬಿಬ್ಬು.

ಜಿಲ್ಲಾಡಳಿತ ವೈನ್‌ಪಾರ್ಕ್‌ಗೆಂದು 140 ಎಕರೆ ಜಮೀನು ನೀಡಿದೆ. ಇದೀಗ ಅದು ಅಪರಾತಪರಾ ಆಗುತ್ತಿದೆ ಎಂದು ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಪ್ರಸ್ತಾಪಿಸುತ್ತಿದ್ದಂತೆ ಚುರುಕಾದ ಕಾಗೋಡು, ‘ಶಿವಾನಂದ ಆ ವಿಷ್ಯಾ ಇಲ್ಲಿ ಬ್ಯಾಡ. ಅದು ಭಾವ–ನೆಂಟನ ವ್ಯವಹಾರ. ಅದನ್ನು ಇಲ್ಲಿ ಹೇಳೋದು ಬ್ಯಾಡ’ ಎಂದು ಬ್ರೇಕ್‌ ಹಾಕುತ್ತಿದ್ದಂತೆ ಸಭಾಂಗಣ ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.