ADVERTISEMENT

ಭಾನುವಾರ 25–6–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST

* ಬ್ಯಾಂಕ್ ರಾಷ್ಟ್ರೀಕರಣ ಕಾಂಗ್ರೆಸ್ ಉದ್ದೇಶವಿಲ್ಲ: ನಾಯಕರ ಧೋರಣೆ
ನವದೆಹಲಿ, ಜೂನ್ 24–
ಕಾಂಗ್ರೆಸ್ ಪಕ್ಷದ ಆರ್ಥಿಕ ಧೋರಣೆಗಳನ್ನು ಕುರಿತಾದ ಅಧಿಕೃತ ಕರಡು ನಿರ್ಣಯದ ಬಗ್ಗೆ ಇಂದು ಪಕ್ಷದ ನಾಯಕರು ಮಾತನಾಡಿದ ಧಾಟಿಯನ್ನು ಗಮನಿಸಿದರೆ, ರಾಷ್ಟ್ರದ ಸಾಲ ನೀಡಿಕೆ ಸಂಸ್ಥೆಗಳನ್ನು ಸಂಪೂರ್ಣವಾಗಿ ರಾಷ್ಟ್ರೀಕರಣಗೊಳಿಸುವ ಆಲೋಚನೆ ಪಕ್ಷಕ್ಕಿಲ್ಲವೆಂದೂ ಬ್ಯಾಂಕು ಠೇವಣಿಗಳ ವಿತರಣೆಯನ್ನು  ಹತೋಟಿಗೊಳಿಸುವ ಮಾರ್ಗಗಳನ್ನು ಕುರಿತು ಅದು ಆಲೋಚಿಸುತ್ತಿದೆಯೆಂದೂ ಕಂಡುಬರುವುದು.

***

*  ಚೀನ ಜೊತೆ ಬಾಂಧವ್ಯ ರದ್ದು ರಾಷ್ಟ್ರಹಿತದೃಷ್ಟಿಯಿಂದ ಸೂಕ್ತವಲ್ಲ ಎಂದು ಸ್ವರಣ್‌ಸಿಂಗ್
ನವದೆಹಲಿ, ಜೂ. 24–
ಪ್ರಸಕ್ತ ಪರಿಸ್ಥಿತಿಯಲ್ಲಿ ಚೀನಾ ದೊಡನೆ ನಮ್ಮ ರಾಜತಾಂತ್ರಿಕ ಬಾಂಧವ್ಯ ಕಡಿದು
ಕೊಳ್ಳುವುದು ಸಮಗ್ರ ರಾಷ್ಟ್ರೀಯ ಹಿತದೃಷ್ಟಿಯಿಂದ ಸಾಧುವಲ್ಲ ಎಂದು ರಕ್ಷಣಾ ಮಂತ್ರಿ ಸ್ವರಣ್ ಸಿಂಗ್ ಅವರು ಇಂದು ರಾಜ್ಯ ಸಭೆಯಲ್ಲಿ ತಿಳಿಸಿದರು.

ADVERTISEMENT

ಚೀನಾದ ಆಕ್ರಮಣ ಪ್ರವೃತ್ತಿ ಮತ್ತು ಭಾರತದ ರಾಜತಾಂತ್ರಜ್ಞ ಅಧಿಕಾರಿಗಳು  ಎದುರಿಸಬಹುದಾದ ಅನಾನುಕೂಲಗಳ ಅರಿವಿದ್ದರೂ ಕೂಡ ಬಾಂಧವ್ಯ ರದ್ದು ಸೂಕ್ತವಲ್ಲ ಎಂದು ಅಂತರ ರಾಷ್ಟ್ರೀಯ ಪರಿಸ್ಥಿತಿ ಮೇಲೆ ನಡೆದ ಚರ್ಚೆಗೆ ವಿದೇಶಾಂಗ ಮಂತ್ರಿ ಎಂ.ಸಿ. ಬಾಗಿಲಾ ಪರವಾಗಿ ಉತ್ತರ ನೀಡಿದ ಸಿಂಗ್ ಹೇಳಿದರು.

***

* ಮಹಿಳೆಯರೇ ಮೊದಲು ನಗರದ ಕಾಲೇಜಿಗೆ ಕನ್ನಡದ ಪ್ರವೇಶ
ಬೆಂಗಳೂರು, ಜೂ. 24–
‘ಪಾಠ ಕನ್ನಡದಲ್ಲಿ ಸುಲಭವಾಗಿ ಅರ್ಥವಾಗುತ್ತೆ ಬೇಗ ಅರ್ಥವಾಗುತ್ತೆ’.

ಈ ವರ್ಷದಿಂದ ನಗರದ ಮಹಾರಾಣಿ ಕಾಲೇಜಿನಲ್ಲಿ ಆರಂಭವಾಗಿರುವ ಕನ್ನಡ ಮಾಧ್ಯಮದ ಪಿ.ಯು.ಸಿ. ತರಗತಿಗೆ ಉತ್ಸಾಹದಿಂದ ಸೇರಿರುವ ವಿದ್ಯಾರ್ಥಿನಿಯರ ಸಾರ್ವತ್ರಿಕ ಪ್ರತಿಕ್ರಿಯೆಯಿದು.

ಕನ್ನಡ ಮಾಧ್ಯಮದ ಪಿ.ಯು.ಸಿ. ತರಗತಿ (ಆರ್ಟ್ಸ್ ವಿಭಾಗ) ಇಂದು ಮಹಾರಾಣಿ ಕಾಲೇಜಿನಲ್ಲಿ ಆರಂಭ ವಾಯಿತು. ಕಾಲೇಜು ಮಟ್ಟದಲ್ಲಿ ಕನ್ನಡವನ್ನು ಪರ್ಯಾಯ ಮಾಧ್ಯಮವಾಗಿ ಜಾರಿಗೆ ತರಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯ ತೀರ್ಮಾನ ಕೈಗೊಂಡ ನಂತರ, ಈ ವಿದ್ಯಾನಿಲಯಕ್ಕೆ ಸೇರಿದ ಮಹಾರಾಣಿ ಕಾಲೇಜು ಪ್ರಪ್ರಥಮವಾಗಿ ಈ ನಿರ್ಧಾರ ಕಾರ್ಯರೂಪಕ್ಕೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.