ADVERTISEMENT

‘ಶ್ರೀರಾಮನಿಗಿಂತ ದೀರ್ಘ ವನವಾಸ ನನ್ನದು..!’

ಡಿ.ಬಿ, ನಾಗರಾಜ
Published 15 ಜುಲೈ 2017, 19:30 IST
Last Updated 15 ಜುಲೈ 2017, 19:30 IST

ವಿಜಯಪುರ: ‘14 ವರ್ಷಗಳ ವನವಾಸದ ಬಳಿಕ ಶ್ರೀರಾಮನಿಗೆ ರಾಜ್ಯಾಧಿಕಾರ ದೊರೆಯಿತು. ಇದಕ್ಕಿಂತಲೂ ಎರಡು ವರ್ಷ ಹೆಚ್ಚಿನ ಅವಧಿ ಕಾಂಗ್ರೆಸ್‌ನಲ್ಲಿ ಕಳೆದ ನನಗೆ ಯಾವ ಅಧಿಕಾರವೂ ದೊರಕಲಿಲ್ಲ...’

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ. ನಂಜುಂಡಿ ಕಾಂಗ್ರೆಸ್‌ ತೊರೆದಿದ್ದಕ್ಕೆ ವಿಜಯಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಪರಿಯಿದು.

‘ವಿಧಾನ ಪರಿಷತ್‌ಗೆ ನಾಮಕರಣ, ಚುನಾವಣೆ ಮುಂತಾದ ವಿಚಾರಗಳು ಪ್ರಸ್ತಾಪವಾದಾಗಲೆಲ್ಲ ನನ್ನ ಹೆಸರು ಮುಂಚೂಣಿಯಲ್ಲಿರುತ್ತಿತ್ತು. ಆದರೆ ಹೈಕಮಾಂಡ್‌ನಿಂದ ಬರುವ ಅಂತಿಮ ಪಟ್ಟಿಯಲ್ಲಿ ಮಾತ್ರ ಇರುತ್ತಿರಲಿಲ್ಲ.

ADVERTISEMENT

‘ಇದರಿಂದ ಪ್ರತಿ ಬಾರಿಯೂ ನಮ್ಮ ಸಮಾಜದ ಜನ ನಾನು ಎಂಎಲ್‌ಸಿ ಆಗುತ್ತೇನೆ ಎಂಬ ಖುಷಿಯಿಂದ ಪಟಾಕಿ, ಸಿಹಿ ಸಿದ್ಧಪಡಿಸಿಟ್ಟುಕೊಂಡಿರುತ್ತಿದ್ದರು. ನಮ್ಮ ಸಂಭ್ರಮ ಅಷ್ಟಕ್ಕೇ ಸೀಮಿತವಾಗುತ್ತಿತ್ತು’ ಎಂದರು.

ಬಿಜೆಪಿಯವರು ನಿಮ್ಮನ್ನು ಎಂಎಲ್‌ಸಿ ಮಾಡುತ್ತಾರಾ ಎಂದು ಪತ್ರಕರ್ತರು ಪ್ರಶ್ನಿಸುತ್ತಿದ್ದಂತೆ, ‘ಇದೀಗ ಪಕ್ಷಕ್ಕೆ ಸೇರ್ಪಡೆಯಾಗಿರುವೆ. ಇಲ್ಲಿಂದಲಾದರೂ ವಿಧಾನ ಪರಿಷತ್‌ ಸದಸ್ಯತ್ವ ಸಿಗುತ್ತಾ ಎಂದು, ಇಲ್ಲಿಯೂ 16 ವರ್ಷ ಕಾಯುವೆ ಎನ್ನುತ್ತಿದ್ದಂತೆ’ ಪತ್ರಿಕಾಗೋಷ್ಠಿ ನಗೆಗಡಲಲ್ಲಿ ತೇಲಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.