ADVERTISEMENT

ಸರ್ಕಾರವನ್ನೇ ಹೆದರಿಸುವವರು ಸಂಘದಲ್ಲಿದ್ದಾರೆಯೇ?

ಇ.ಎಸ್.ಸುಧೀಂದ್ರ ಪ್ರಸಾದ್
Published 7 ಅಕ್ಟೋಬರ್ 2017, 19:30 IST
Last Updated 7 ಅಕ್ಟೋಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಧಾರವಾಡ: ‘ಕರ್ನಾಟಕ ವಿದ್ಯವರ್ಧಕ ಸಂಘಕ್ಕೆ 125 ವರ್ಷಗಳ ಇತಿಹಾಸವಿದೆ. ಅನೇಕ ಹಿರಿಯ ಸಾಹಿತಿಗಳು, ಕಾನೂನು ಪಂಡಿತರು, ವಿಚಾರವಂತರು ಸಂಘದೊಂದಿಗೆ ಒಡನಾಟ ಹೊಂದಿದ್ದರೂ ಇಂದಿಗೂ ಇಲ್ಲಿ ನಾಡಗೀತೆ ಹಾಡಲಾಗುತ್ತಿಲ್ಲ’ ಎಂದು ಹಿರಿಯ ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಆಶ್ಚರ್ಯ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲೇ ಆಯೋಜಿಸಲಾಗಿದ್ದ ದಸರಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಇಲ್ಲಿನ ಪ್ರತಿ ಕಾರ್ಯಕ್ರಮಕ್ಕೂ ಮೊದಲು ಹಾಡಲಾಗುವ ‘ವಂದೇ ಮಾತರಂ’ ಹಾಗೂ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಗಳ ಕುರಿತು ನನಗೆ ಗೌರವವಿದೆ. ಆದರೆ,  ‘ಜಯ ಭಾರತ ಜನನಿಯ ತನುಜಾತೆ’ ಗೀತೆಯನ್ನು ಸರ್ಕಾರ ನಾಡಗೀತೆಯನ್ನಾಗಿ ಆಯ್ಕೆ ಮಾಡಿದ ಮೇಲೆ ಅದನ್ನು ಗೌರವಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಆದರೆ, ಅದು ಇಲ್ಲಿ ಪಾಲನೆಯಾಗುತ್ತಿಲ್ಲ. ಹಾಗಿದ್ದರೆ ಸರ್ಕಾರವನ್ನೇ ಹೆದರಿಸಿಕೊಂಡವರು ಯಾರಾದರೂ ಇಲ್ಲಿ ಇದ್ದಾರೆಯೇ? ಎಂಬ ಸಂಶಯ ಮೂಡುತ್ತಿದೆ’ ಎಂದಾಗ ವೇದಿಕೆ ಮೇಲಿದ್ದ ಸಂಘದ ಪದಾಧಿಕಾರಿಗಳು ಪರಸ್ಪರರ ಮುಖ ನೋಡಿಕೊಂಡು ಸುಮ್ಮನಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT