ADVERTISEMENT

ಅಣ್ಣಂದು ಇನ್‌ಕಮ್ಮಿಂಗ್, ನಂದು ಔಟ್‌ ಗೋಯಿಂಗ್‌!

ಡಿ.ಬಿ, ನಾಗರಾಜ
Published 10 ಫೆಬ್ರುವರಿ 2018, 19:30 IST
Last Updated 10 ಫೆಬ್ರುವರಿ 2018, 19:30 IST

ವಿಜಯಪುರ: ‘ನಮ್ಮಣ್ಣನ ನಿರ್ಧಾರ ಅವ್ನಿಗೆ ಬಿಟ್ರೆ ಬೇರೆ ಯಾರಿಗೂ ಗೊತ್ತಾಗಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾನೆ ಎಂಬುದು ಅವನೊಬ್ಬನಿಗೆ ಗೊತ್ತಿರುತ್ತೆ ಅಷ್ಟೇ...!’

ಬಬಲೇಶ್ವರದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಶುಕ್ರವಾರ ವಿಜಯಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರವಿದು.

ನಿಮ್ಮ ಹಿರಿಯ ಸಹೋದರ, ಕಾಂಗ್ರೆಸ್‌ನ ಹಾಲಿ ಶಾಸಕ ಶಿವಾನಂದ ಪಾಟೀಲ, ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಂತಲ್ಲಾ ಎಂದು ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ, ‘ಹೈಕಮಾಂಡ್‌ ನಿರ್ಧಾರವೇ ಅಂತಿಮ’ ಎಂದರು.

ADVERTISEMENT

‘ನಾವಿಬ್ರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರು. ಆದ್ರೆ ಸ್ವಭಾವ ತದ್ವಿರುದ್ಧ. ನಮ್ಮಣ್ಣಂದು ‘ಓನ್ಲೀ ಇನ್‌ಕಮಿಂಗ್‌’. ಅವ್ನು ಎಂದೂ ಯಾರಿಗೂ ತನ್ನ ಗುಟ್ಟು ಬಿಟ್ಟುಕೊಡಲ್ಲ. ಏನ್‌ ನಿರ್ಧಾರ ಮಾಡ್ತಾವ್ನೇ ಅಂತ ಕೊನೇ ಕ್ಷಣದವರೆಗೂ ಗೊತ್ತಾಗಲ್ಲ.

‘ಹೈಕಮಾಂಡ್‌ನಲ್ಲಿ ಯಾರ ಜತೆ ಸಂಪರ್ಕದಲ್ಲಿದ್ದಾನೆ ಎಂಬುದನ್ನೂ ಹೇಳಲ್ಲ. ಇದು ಅವ್ನ ಸ್ಟೈಲ್‌. ಆದ್ರೆ ನನ್ದು ಹಂಗಲ್ಲ. ಇನ್‌ಕಮಿಂಗ್‌ಗಿಂತ ಔಟ್‌ ಗೋಯಿಂಗೇ ಜಾಸ್ತಿ’ ಎನ್ನುತ್ತಿದ್ದಂತೆ ಗೋಷ್ಠಿ ನಗೆಗಡಲಲ್ಲಿ ತೇಲಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.