ADVERTISEMENT

ಕಾಯ್ದೆ ತಿದ್ದುಪಡಿಗೆ ಚಿಂತನೆ

ಪ್ರಜಾವಾಣಿ ವಿಶೇಷ
Published 26 ಜೂನ್ 2015, 19:30 IST
Last Updated 26 ಜೂನ್ 2015, 19:30 IST
ಭರತ್‌ ಲಾಲ್‌ ಮೀನಾ
ಭರತ್‌ ಲಾಲ್‌ ಮೀನಾ   

ಕೆ.ಎಸ್‌.ಒ.ಯು. ಬೆಳವಣಿಗೆಗಳ  ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‌ ಲಾಲ್‌ ಮೀನಾ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ಇಲಾಖೆ ಮಧ್ಯಪ್ರವೇಶಿಸಿದ್ದರೆ ಕೆ.ಎಸ್‌.ಒ.ಯು. ಕೋರ್ಸ್‌ಗಳ ಮಾನ್ಯತೆ ರದ್ದಾಗುವುದನ್ನು ತಡೆಯಬಹುದಿತ್ತೇ?
ಕೆ.ಎಸ್‌.ಒ.ಯು. ವೃತ್ತಿಪರ ಶಿಕ್ಷಣ ಕೋರ್ಸ್‌ಗಳನ್ನು ಸ್ಥಾಪಿಸುವುದಕ್ಕೆ ವಿ.ವಿ. ಸಿಂಡಿಕೇಟ್‌ ಒಪ್ಪಿರಲಿಲ್ಲ. ಇಲಾಖೆ ಕೂಡ ಕೋರ್ಸ್‌ ಆರಂಭಿಸದಂತೆ ಸೂಚಿಸಿತ್ತು. ಮಾನ್ಯತೆ ರದ್ದಾಗಲು ಏನು ಕಾರಣ ಎಂಬುದರ ಅಧ್ಯಯನ ನಡೆಸಲು ಇಲಾಖೆಯ ತಂಡವೊಂದನ್ನು ಕಳುಹಿಸಲಾಗಿದೆ. ತಂಡವು ಕೂಲಂಕಷ ಪರಿಶೀಲನೆ ನಡೆಸಲಿದೆ.

* ಸಾವಿರಾರು ಮುಗ್ಧ ಪದವೀಧರರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಹೇಗೆ ರಕ್ಷಿಸುತ್ತೀರಿ?
ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆದೇಶ ವಾಪಸ್‌ ಪಡೆಯುವಂತೆ ಯುಜಿಸಿಗೆ ಮನವಿ ಮಾಡುತ್ತೇವೆ. ಜೊತೆಗೆ ಕಾನೂನು ಹೋರಾಟದ ಹಾದಿ ಇದ್ದೇ ಇದೆ.

* ಇಂತಹ ಘಟನೆಗಳು ಮರುಕಳಿಸದಂತೆ ಏನು ಮಾಡುತ್ತೀರಿ?
ಯುಜಿಸಿ, ಕೇಂದ್ರ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೂರಶಿಕ್ಷಣ ನೀಡುವ ವಿ.ವಿ.ಗಳಿಗೆ ಸೂಚಿಸಲಾಗುವುದು. ರಾಜ್ಯದ ವ್ಯಾಪ್ತಿಯಲ್ಲಿ ಮಾತ್ರ ದೂರ ಶಿಕ್ಷಣ ನೀಡುವಂತೆ ತಿಳಿಸುತ್ತೇವೆ. ಕೆ.ಎಸ್‌.ಒ.ಯು. ಕಾಯ್ದೆಗೆ ತಿದ್ದುಪಡಿ ತರುವ ಚಿಂತನೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.