ADVERTISEMENT

ಅದು ‘ಕಾಮಸೂತ್ರ’ ಅಲ್ಲ...

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 19:30 IST
Last Updated 15 ಡಿಸೆಂಬರ್ 2017, 19:30 IST
ಅದು ‘ಕಾಮಸೂತ್ರ’ ಅಲ್ಲ...
ಅದು ‘ಕಾಮಸೂತ್ರ’ ಅಲ್ಲ...   

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್ ಶ್ರೀಲಂಕಾದ ಕೊಲಂಬೊದಲ್ಲಿ ನೂತನ ರೆಸ್ಟೊರೆಂಟ್‌ ಆರಂಭಿಸಿದ್ದು, ಈ ಹೋಟೆಲ್‌ ಹೆಸರಿನಿಂದ ಅವರ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ.

ಜಾಕ್ವೆಲಿನ್‌ ಅವರ ಹೊಸ ಹೋಟೆಲ್‌ ಹೆಸರಿನಿಂದಲೇ ಖ್ಯಾತಿ ಪಡೆದುಕೊಂಡಿದೆ. ಜಾಕ್ವೆಲಿನ್‌ ಹೋಟೆಲ್‌ ಹೆಸರು ಕೇಮ ಸೂತ್ರ (Kaema Sutra). ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಘೋಷಣೆ ಮಾಡಿದ್ದು, ಹೋಟೆಲ್‌ ಶೆಫ್‌ ದರ್ಶನ್‌ ಮುನಿದಾಸ ಅವರ ಜೊತೆಗಿನ ಪೋಟೊಗಳನ್ನು ಇನ್‌ಸ್ಟಾಂ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾ ಗ್ರಾಂನಲ್ಲಿ ಅವರು ಹೋಟೆಲ್‌ ಹೆಸರು (Kaema Sutra) ಎಂದು ಪ್ರಕಟಿಸಿಕೊಂಡ ತಕ್ಷಣ ಅಭಿಮಾನಿಗಳು ಹುಚ್ಚೆದ್ದು ಪ‍್ರತಿಕ್ರಿಯಿಸಲು ತೊಡಗಿದ್ದಾರೆ. ಇಂಗ್ಲಿಷ್‌ನ ಇ ಅಕ್ಷರವನ್ನು ನುಂಗಿ ಓದಿಕೊಂಡಿದ್ದೇ ಈ ಎಡವಟ್ಟಿಗೆ ಕಾರಣ. ಅಂದರೆ, ಅಭಿಮಾನಿಗಳು ‘ಕಾಮಸೂತ್ರ’ ಎಂದು ಓದಿಕೊಂಡಿದ್ದಲ್ಲದೆ ಈ ಬಗ್ಗೆ ಟ್ರೋಲ್‌ ಕೂಡಾ ಮಾಡಿದ್ದಾರೆ. ‘ಹೋಟೆಲ್‌ ಹೆಸರು ಕಾಮಸೂತ್ರವೇ? ಬಾರಿ ಯಶಸ್ಸು ಗಳಿಸಲಿದೆ ಬಿಡಿ’ ಎಂದು ಕೆಲವರು ಕಮೆಂಟ್‌ ಮಾಡಿದರೆ, ‘ಹೋಟೆಲ್‌ ಹೆಸರನ್ನೇ ಬದಲಾಯಿಸಿ’ ಎಂದು ಕೆಲವರು ಸಲಹೆ ನೀಡಿದ್ದಾರೆ. Kaema Sutra ಹೆಸರಿನ ಮಧ್ಯೆ ‘ಇ’ ಇರುವುದಕ್ಕೆ ಬಚಾವಾದೆವು’ ಎಂಬ ಕಮೆಂಟ್‌ಗಳೂ ಅವರಿಗೆ ಬಂದಿವೆ.

ADVERTISEMENT

ಬಾಲಿವುಡ್‌ನ ‘ಡ್ರೈವ್‌’ ಹಾಗೂ ‘ರೇಸ್‌–3’ ಚಿತ್ರದಲ್ಲಿ ಜಾಕ್ವೆಲಿನ್‌ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.