ADVERTISEMENT

ಆಲ್ಬಂನಲ್ಲಿ ಮಯೂರಿ ನರ್ತನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಆಲ್ಬಂನಲ್ಲಿ ಮಯೂರಿ ನರ್ತನ
ಆಲ್ಬಂನಲ್ಲಿ ಮಯೂರಿ ನರ್ತನ   

* ಹಿಂದಿ, ಇಂಗ್ಲಿಷ್‌ ವಿಡಿಯೊ ಆಲ್ಬಂನಲ್ಲಿ ಅವಕಾಶ ಸಿಕ್ಕಿದ್ದು ಹೇಗೆ?

ಈ ವಿಡಿಯೊ ಆಲ್ಬಂ ನಿರ್ದೇಶಕ ಅಭಿಷೇಕ್‌ ಚೆಡ್ಡ ಅವರ ಅಂಗಡಿಯಲ್ಲಿಯೇ ನಾನು ಆಭರಣ ಕೊಳ್ಳುತ್ತೇನೆ. ಹೀಗೊಂದು ಅವಕಾಶ ಇದೆ ನಟಿಸುತ್ತೀರಾ ಎಂದು ಅವರು ಕೇಳಿದರು. ಬಿಡುವಿನ ಸಮಯದಲ್ಲೇ ಈ ಅವಕಾಶ ಬಂತು. ಹಾಗಾಗಿ ಒಪ್ಪಿಕೊಂಡೆ. ಹಣಕ್ಕಾಗಿ ಅಲ್ಲ ಪ್ಯಾಷನ್‌ಗೋಸ್ಕರ ಮಾಡುತ್ತಿದ್ದಾರೆ.

* ಚಿತ್ರೀಕರಣದ ಅನುಭವ ಹೇಗಿತ್ತು?

ADVERTISEMENT

ನಾನು ಆಧುನಿಕ ಹುಡುಗಿಯಾಗಿ ಕಾಣಿಸಿಕೊಂಡಿದ್ದೀನಿ. ಬ್ಯಾಂಕಾಕ್‌ನಲ್ಲಿ ಹತ್ತು ದಿನ ಚಿತ್ರೀಕರಣ ಮಾಡೆದೆವು. ಹೊಸ ಅನುಭವ ನೀಡಿತು.

* ಆಲ್ಬಂನ ಕಥಾ ವಸ್ತು...

ಇಂಗ್ಲಿಷ್‌ನ ‘ಗರ್ಲ್ ನಾಟ್ ಸಿನ್’ ಆಲ್ಬಂ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಹೇಳುತ್ತದೆ. ಮಹಿಳೆಯರ ಬಗ್ಗೆ ಕಾಳಜಿ ತೋರುವ ಮತ್ತು ಅವರಿಗೂ ಗಂಡಸರಂತೆ ಸ್ವಾತಂತ್ರ್ಯ ಬೇಕು ಎಂಬ ಸಂದೇಶವಿದೆ. ಅವಳು ಹಾಕಿಕೊಳ್ಳುವ ಬಟ್ಟೆಗೆ, ಅವಳ ಸಾಧನೆಗೆ ಯಾರೂ ಅಡ್ಡಿಯಾಗಬಾರದು. ಅವಳ ಮಿತಿಯನ್ನು ಪೋಷಕರು ತಿಳಿಸುತ್ತಾರೆ, ಬೇರೆಯವರು ಹೇಳುವ ಅವಶ್ಯಕತೆ ಇಲ್ಲ ಎಂಬ ಸಂದೇಶ ನೀಡುತ್ತದೆ. ಹಿಂದಿ ಆಲ್ಬಂ ರೊಮಾಂಟಿಕ್‌ ಆಗಿದೆ. ಇದರಲ್ಲಿ ಸಂದೇಶವಿಲ್ಲ, ಜನರಿಗೆ ಖುಷಿ ಕೊಡುತ್ತದೆ. ಶಿವಾಂಗಿ ಭಾಯನಾ ಅವರ ಸಂಗೀತ ಕಿವಿಗೆ ಇಂಪು.

* ಕಿರುತೆರೆಗೆ ಮತ್ತೆ ಬರುವ ಸುದ್ದಿ ನಿಜನಾ?

ಕಿರುತೆರೆಯ ಬಗ್ಗೆ ಪ್ರೀತಿಯಿದೆ. ಹಾಗಾಗಿ ಆಗಾಗ್ಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.

* ಮುಂದೆ ಹಿಂದಿ ಸಿನಿಮಾದಲ್ಲಿ ನಿಮ್ಮನ್ನು ನೋಡಬಹುದಾ?

ಒಳ್ಳೆಯ ಅವಕಾಶ ಸಿಕ್ಕರೆ ನಟಿಸುತ್ತೇನೆ.

* ಕಿರುತೆರೆ, ಹಿರಿತೆರೆ ಎರಡರಲ್ಲಿ ನಿಮ್ಮ ಆಯ್ಕೆ?

ಎರಡನ್ನೂ ನಾನು ಪ್ರೀತಿಸುತ್ತೇನೆ. ಧಾರಾವಾಹಿಯಿಂದಲೇ ನನಗೆ ಜನಪ್ರಿಯತೆ ಸಿಕ್ಕಿದ್ದು. ಈಗಲೂ ಜನ ನನ್ನನ್ನು ಅಶ್ವಿನಿ ಎಂದೇ ಗುರುತಿಸುತ್ತಾರೆ. ಆದರೆ ಎರಡು ದೋಣಿಯ ಪಯಣ ಸಾಧ್ಯವಿಲ್ಲವಲ್ಲ. ಹಾಗಾಗಿ ಸದ್ಯ ಸಿನಿಮಾದಲ್ಲಿ ಮಾತ್ರವೇ ಅಭಿನಯಿಸುತ್ತಿದ್ದೇನೆ. ಸಿನಿಮಾದಲ್ಲಿ ಹೆಚ್ಚು ಬಿಡುವು ಸಿಗುತ್ತದೆ. ಇತ್ತೀಚೆಗಷ್ಟೇ ಅಪ್ಪ ತೀರಿಕೊಂಡ ಕಾರಣಕ್ಕೆ ಅಮ್ಮನ ಜೊತೆಗೆ ನಾನು ಹೆಚ್ಚು ಸಮಯ ಇರಬೇಕಾಗಿದೆ. ಬಿಡುವು ಸಿಕ್ಕಾಗಲೆಲ್ಲ ಅವರನ್ನು ಕರೆದುಕೊಂಡು ಎಲ್ಲಿಗಾದರೂ ಹೋಗುತ್ತಿರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.