ADVERTISEMENT

‘ಇಂಡಸ್ಟ್ರಿಗೆ ಬಂದಿದ್ದು ತಡವಾಯ್ತು’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಪಲ್ಲವಿ
ಪಲ್ಲವಿ   

ಬಾಲಿವುಡ್‌ ನಂಟು
ನಟಿಯಾಗಬೇಕು ಎಂಬುದು ನನ್ನ ಬಹು ದಿನದ ಕನಸು. ರೂಪದರ್ಶಿಯಾಗಿದ್ದಾಗ ಹಲವು ಆಡಿಷನ್‌ಗಳಲ್ಲಿ ಭಾಗವಹಿಸಿದ್ದೆ. ಆದರೆ ರ‍್ಯಾಂಪ್‌ ಮೇಲೆ ನಡೆಯುವುದಕ್ಕೂ, ನಟನೆಗೂ ಬಹಳ ವ್ಯತ್ಯಾಸವಿದೆ. ಇದು ಮನವರಿಕೆ ಆದ ದಿನವೇ ನಟನೆಯ ಪಟ್ಟುಗಳನ್ನು ಕಲಿಯಲು ಪ್ರಯತ್ನಿಸಿದೆ. ಹಲವು ಕಾರ್ಯಾಗಾರಗಳಲ್ಲಿ ಭಾಗವಹಿಸಿ, ನಟನಾ ಕೌಶಲ ಬೆಳೆಸಿಕೊಂಡೆ. ನನ್ನ ಪ್ರತಿಭೆ ಗುರುತಿಸಿ ‘ಉಮೀದ್‌’ ತಂಡ ಅವಕಾಶ ನೀಡಿದೆ.

‘ಉಮೀದ್’ ವೈಶಿಷ್ಟ್ಯ
ಇದು ಮೆಡಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ಹೊಸ ಬಗೆಯ ಸಿನಿಮಾ. ಮುಂಬೈನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವ ಸಿನಿಮಾ ನಾಯಕಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾಳೆ. ಈ ವೇಳೆ ಆಕೆ ಸಮಾಜದಲ್ಲಿ ನಡೆಯುವ ಹಲವು ಕಾನೂನು ಬಾಹಿರ ಚಟುವಟಿಕೆ ಗುರುತಿಸಿ ಅದನ್ನು ವಿರೋಧಿಸುತ್ತಾಳೆ... ಹೀಗೆ ಕಥೆ ಸಾಗುತ್ತದೆ. ನನ್ನ ಪಾತ್ರ ರೋಚಕವಾಗಿದೆ.

ಚಿತ್ರೀಕರಣದ ಅನುಭವ
ಮೊದಲ ದಿನ ತುಂಬಾ ಭಯ ಆಗಿತ್ತು. ಈ ಸಿನಿಮಾದಲ್ಲಿ ಹಿರಿಯ ನಟರಿದ್ದಾರೆ. ಅವರ ನಟನೆ ನೋಡಿ ಬೆಳೆದ ನನಗೆ ಅವರ ಮುಂದೆ ಹೇಗೆ ನಟಿಸಿವುದಪ್ಪಾ ಎನಿಸಿತ್ತು. ಆದರೆ ನನ್ನ ಪಾತ್ರದ ಚಿತ್ರೀಕರಣ ಆರಂಭಕ್ಕೂ ಮೊದಲೇ ಕೆಲ ಸನ್ನಿವೇಶಗಳ ಚಿತ್ರೀಕರಣ ನಡೆದಿತ್ತು. ಅದನ್ನು ಗಮನಿಸಲು ಚಿತ್ರೀಕರಣದ ಸ್ಥಳಕ್ಕೆ ಬರುವಂತೆ ನಿರ್ದೇಶಕರು ತಿಳಿಸಿದ್ದರು. ನಿಧಾನವಾಗಿ ಭಯ ಕಡಿಮೆಯಾಯಿತು.

ADVERTISEMENT

ಮಾಡೆಲಿಂಗ್- ನಟನೆ
ಎರಡಕ್ಕೂ ಹೆಚ್ಚೇನು ವ್ಯತ್ಯಾಸವಿಲ್ಲ. ಪ್ರತಿದಿನ ಹೊಸ ಜಗತ್ತು ನೋಡ್ತೀವಿ. ಕೆಲಸ ಮಾಡುವ ಮೊದಲು ಅದರ ಫಲ ಏನು ಎಂಬುದು ತಿಳಿಯುವುದಿಲ್ಲ. ಎರಡೂ ಕ್ಷೇತ್ರಕ್ಕೂ ಇದು ಅನ್ವಯವಾಗುತ್ತದೆ. ಒಟ್ಟಿನಲ್ಲಿ ಬಣ್ಣದ ಲೋಕದ ಪಯಣ ರೋಚಕವಾಗಿರುತ್ತದೆ.

ಗುರಿ ಏನು?
ಸದ್ಯ ನಟನೆಯಲ್ಲಿ ಖುಷಿ ಕಂಡಿದ್ದೇನೆ. ಇಷ್ಟಪಟ್ಟು ಮಾಡುತ್ತಿರುವ ಕೆಲಸದಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ನಟನೆಯ ನಡುವೆ ಬಿಡುವು ಸಿಕ್ಕಾಗ ರ‍್ಯಾಂಪ್‌ ಮೇಲೆಯೂ ನನ್ನನ್ನು ನೋಡಬಹುದು.

ನಟನೆಗೆ ಮೊದಲೇ ಬರಬೇಕಿತ್ತೆ?
ನಟನೆಯನ್ನು ಮೊದಲೇ ಗಂಭೀರವಾಗಿ ತೆಗೆದುಕೊಂಡಿದ್ದರೆ ಅನುಭವ ಹೆಚ್ಚುತ್ತಿತ್ತು. ಜನಪ್ರಿಯತೆಯೂ ಸಿಗುತ್ತಿತ್ತು. ಆದರೆ ಎಲ್ಲದಕ್ಕೂ ಕಾಲ ಬರಬೇಕಲ್ವಾ. ನನಗೆ ಬೇಸರವೇನು ಇಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.