ADVERTISEMENT

‘ಇಂದು ಸರ್ಕಾರ್’ ಟ್ರೇಲರ್ ನೋಡಿದ್ರಾ?

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 9:42 IST
Last Updated 17 ಜುಲೈ 2017, 9:42 IST
‘ಇಂದು ಸರ್ಕಾರ್’ ಟ್ರೇಲರ್ ನೋಡಿದ್ರಾ?
‘ಇಂದು ಸರ್ಕಾರ್’ ಟ್ರೇಲರ್ ನೋಡಿದ್ರಾ?   

‘ಫ್ಯಾಷನ್’, ‘ಪೇಜ್‌ 3’ನಂಥ ಸಿನಿಮಾಗಳನ್ನು ನಿರ್ದೇಶಿಸಿದ ಬಾಲಿವುಡ್‌ನ ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ಬಹುನಿರೀಕ್ಷಿತ ‘ಇಂದು ಸರ್ಕಾರ್’ ಸಿನಿಮಾದ  ಟ್ರೇಲರ್ ಬಿಡುಗಡೆಯಾಗಿದೆ. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತ ಸಿನಿಮಾ ಇದಾಗಿದ್ದು, ಈಗಾಗಲೇ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಮೂಡಿಸಿದೆ.

ಇಂದಿರಾ ಗಾಂಧಿಯಾಗಿ ನಟಿ ಸುಪ್ರಿಯಾ ವಿನೋದ್ ಹಾಗೂ ಸಂಜಯ್ ಗಾಂಧಿ ಪಾತ್ರದಲ್ಲಿ ನಟ ನೀಲ್ ನಿತಿನ್ ಮುಕೇಶ್ ನಟಿಸಿದ್ದಾರೆ.  ‘ಪಿಂಕ್’ ಸಿನಿಮಾ ಖ್ಯಾತಿಯ ನಟಿ ಕೃತಿ ಕುಲ್ಹರಿ ಬಂಡಾಯ ಕವಯತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಎರಡೂವರೆ ನಿಮಿಷಗಳ ಟ್ರೇಲರ್ ಇಡೀ ಸಿನಿಮಾದ ಕಥೆಯನ್ನು ಧ್ವನಿಸುವಂತಿದೆ. 1975ರ ಕಾಲವನ್ನು ಸಿನಿಮಾದಲ್ಲಿ ಮರುಸೃಷ್ಟಿಸಲಾಗಿದೆ. 1975ರಿಂದ 77ರ ಕಾಲಘಟ್ಟದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧರಿಸಿದ ಸಿನಿಮಾ ಇದಾಗಿದೆ.

ADVERTISEMENT

‘ಎಮರ್ಜೆನ್ಸಿ ಮೇ ಎಮೋಷನ್ ನಹೀ’, (ತುರ್ತು ಪರಿಸ್ಥಿತಿಯಲ್ಲಿ ಭಾವುಕತೆ ಸಲ್ಲದು) ‘ಮೈ ಸಿರ್ಫ್ ಏಕ್ ಅಚ್ಫೀ ಪತ್ನಿ ಬನ್‌ನಾ ಚಾಹ್ತೀ ಹೂಂ’ (ನಾನು ಕೇವಲ ಒಳ್ಳೆಯ ಹೆಂಡತಿಯಾಗಲು ಇಚ್ಛಿಸುತ್ತೇನೆ) ಎನ್ನುವ ಸಂಭಾಷಣೆಗಳು ಚಿತ್ರದ ಬಗ್ಗೆ ಕುತೂಹಲ ಕೆರಳಿಸುತ್ತವೆ. ‘ಇಂದು ಸರ್ಕಾರ್’ಗೆ ಅನುಮಲಿಕ್, ಬಪ್ಪಿಲಹರಿ ಸಂಗೀತ ಸಂಯೋಜಿಸಿದ್ದು, ಸಿನಿಮಾ ಜುಲೈ 28ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.