ADVERTISEMENT

ಒಂಟಿ ಚಕ್ರದ ಸೈಕಲ್‌ ಸವಾರಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಒಂಟಿ ಚಕ್ರದ ಸೈಕಲ್‌ ಸವಾರಿ
ಒಂಟಿ ಚಕ್ರದ ಸೈಕಲ್‌ ಸವಾರಿ   
ಸಾಧಿಸುವ ಮನಸ್ಸಿದ್ದರೆ ಕಠಿಣ ಕೆಲಸವೂ ಸುಲಭ ಎನ್ನಿಸುತ್ತದೆ ಎನ್ನುವುದಕ್ಕೆ ಜರ್ಮನಿಯ ಲೂಟ್ಸ್‌ ಇಚಿಲೊಸ್‌ ಸೂಕ್ತ ಉದಾಹರಣೆ. ಬಿಯರ್‌ ಬಾಟಲಿಯ ಮೇಲೆ ಇವರು, ಯುನಿ ಸೈಕಲ್‌ (ಒಂಟಿಚಕ್ರ) ಸವಾರಿ ಮಾಡುವ ಬಗೆಯನ್ನು ಕಂಡರೆ ಎಂಥವರು ನಿಬ್ಬೆರಗಾಗುತ್ತಾರೆ.
 
25 ವರ್ಷದ ಇಚಿಲೊಸ್‌ ಅಥ್ಲೀಟ್‌ ಕೂಡ. 8.93 ಮೀಟರ್‌ವರೆಗೆ ಇರಿಸಿದ್ದ 127 ಬಿಯರ್‌ ಬಾಟಲಿಗಳ ಮೇಲೆ ಸರಾಗವಾಗಿ ಒಂಟಿಚಕ್ರದ ಸೈಕಲ್‌ ಮೂಲಕ ಸಾಗುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ.  ಈ ಹಿಂದೆ ಇಸ್ರೇಲ್‌ನ ವ್ಯಕ್ತಿಯೊಬ್ಬರು 7.99 ಮೀಟರ್‌ ಒಂಟಿ ಚಕ್ರದ ಸೈಕಲಿಂಗ್‌ ಮಾಡಿ ಗಿನ್ನಿಸ್‌ ದಾಖಲೆ ಮಾಡಿದ್ದರು. ಅವರ ದಾಖಲೆಯನ್ನು ಮುರಿದು ಈಗ ಆ ಸ್ಥಾನವನ್ನು ಇಚಿಲೊಸ್‌ ಪಡೆದುಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.