ADVERTISEMENT

ಓಡಲೇಬೇಕಾದ ಎಂಟು ಕಾರಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ಓಡಲೇಬೇಕಾದ ಎಂಟು ಕಾರಣ
ಓಡಲೇಬೇಕಾದ ಎಂಟು ಕಾರಣ   

‘ಓಟ’ ಆರೋಗ್ಯದ ದೃಷ್ಟಿಯಿಂದ ಅತಿ ಅವಶ್ಯಕವಾದ ಸರಳ ವ್ಯಾಯಾಮ. ದಿನದಲ್ಲಿ 30 ನಿಮಿಷ, ವಾರದಲ್ಲಿ ಐದು ದಿನ ಓಡಿದರೆ ಸಾಕು, ಆರೋಗ್ಯ ಸದೃಢವಾಗಿರುತ್ತದೆ ಎನ್ನುತ್ತಾರೆ ವೈದ್ಯರು. ಇಂದಿನ ಜೀವನಶೈಲಿಗೆ ಇದರ ಅವಶ್ಯಕತೆ ಹೆಚ್ಚೇ ಇದೆ. ಆದ್ದರಿಂದ ಓಡಲೇಬೇಕಾದ ಎಂಟು ಕಾರಣಗಳನ್ನು ಇಲ್ಲಿ ನೀಡಲಾಗಿದೆ...

* ಓಡಲೇಬೇಕಾದ ಮೊದಲ ಕಾರಣ ದೈಹಿಕ ಶಕ್ತಿ ಗಳಿಸಲು. ದೇಹದ ಕೆಳ ಭಾಗಕ್ಕೆ, ಸ್ನಾಯುಗಳಿಗೆ, ನರಗಳಿಗೆ ಓಡುವುದು ಶಕ್ತಿ ತುಂಬುತ್ತದೆ. ಕೀಲು ನೋವು ಬರದಂತೆ ತಡೆಯುತ್ತದೆ.

* ತೂಕ ಕಡಿಮೆ ಮಾಡಿಕೊಳ್ಳಲು ಓಡಲೇಬೇಕು.  ಜೊತೆಗೆ ಓಡುವುದರಿಂದ ಚರ್ಮ ಬಿಗಿ ಬರುತ್ತದೆ. ಅಧಿಕ ತೂಕದಿಂದ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ದೂರವಿಡಬಹುದು.

* ಓಡುವ ಅಭ್ಯಾಸವನ್ನು ನಿಯಮಿತವಾಗಿ ಇಟ್ಟುಕೊಂಡರೆ ಮಧುಮೇಹ, ರಕ್ತದ ಏರೊತ್ತಡವನ್ನು  ನಿಯಂತ್ರಿಸಬಹುದು. ರಕ್ತದಲ್ಲಿನ ಸಕ್ಕರೆ ಅಂಶ ಆರೋಗ್ಯಕರ ಮಟ್ಟದಲ್ಲಿರುವಂತೆ ಮಾಡಬಹುದು.

* ಓಡುವುದರಿಂದ ಮೂಳೆಯ ಸಾಂದ್ರತೆ ಹೆಚ್ಚುತ್ತದೆ.  ಪಾದ ಭೂಮಿಗೆ ತಾಕಿ ಒತ್ತಡ ಹಾಕುತ್ತಿದ್ದಂತೆ ದೇಹ ಅದನ್ನು ಗುರುತಿಸಿ ಅಗತ್ಯ ಖನಿಜಾಂಶಗಳನ್ನು ನೀಡುತ್ತದೆ. ಮೂಳೆ ಗಟ್ಟಿಯಾಗುತ್ತದೆ.

* ಓಡುವ ಅಭ್ಯಾಸ ಹೃದಯದ ಸ್ವಾಸ್ಥ್ಯವನ್ನು ಕಾಪಾಡುವುದಲ್ಲದೆ ಹೃದಯಕ್ಕೆ ರಕ್ತದ ಹರಿವನ್ನು ಸರಾಗಗೊಳಿಸುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರವಿಡಬಹುದು.

* ಓಡಬೇಕಾದರೆ ಉತ್ಪತ್ತಿಯಾಗುವ ರಾಸಾಯನಿಕಗಳು ಖಿನ್ನತೆ, ಆತಂಕದ ಲಕ್ಷಣಗಳನ್ನು ತಡೆಯುವಲ್ಲಿ ಸಹಕಾರಿ. ವ್ಯಾಯಾಮ ಹಾಗೂ ಓಟ ವ್ಯಕ್ತಿತ್ವ ಬೆಳವಣಿಗೆಗೂ ಸಹಕರಿಸುತ್ತದೆ.

* ರಕ್ತ ನಾಳ ನಿರಂತರ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಓಟದಿಂದ ಸಾಧ್ಯ. ಫಿಟ್ ಆಗುವುದರೊಂದಿಗೆ ಆರೋಗ್ಯಕರವಾಗಿ ಏರೊತ್ತಡ ನಿಯಂತ್ರಿಸಿ, ಪಾರ್ಶ್ವವಾಯು ಸಾಧ್ಯತೆ ತಡೆಯುತ್ತದೆ.

* ಚಿಕ್ಕವಯಸ್ಸಿನಲ್ಲೇ ಓಡುವುದನ್ನು ಅಭ್ಯಾಸ ಮಾಡಿಕೊಂಡರೆ ಉಸಿರಾಟದ ಸಮಸ್ಯೆಯಿಂದ ದೂರ ಉಳಿಯಬಹುದು. ಶ್ವಾಸಕೋಶ ಹಾಗೂ ಶ್ವಾಸನಾಳಗಳು ಗಟ್ಟಿಯಾಗುವುದು ಇದಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.