ADVERTISEMENT

‘ಓಲ್ಡ್‌ ಫೇತ್‌ಫುಲ್‌’ ಬಿಸಿ ನೀರ ಚಿಲುಮೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
‘ಓಲ್ಡ್‌ ಫೇತ್‌ಫುಲ್‌’ ಬಿಸಿ ನೀರ ಚಿಲುಮೆ
‘ಓಲ್ಡ್‌ ಫೇತ್‌ಫುಲ್‌’ ಬಿಸಿ ನೀರ ಚಿಲುಮೆ   

*ಈ ಚಿಲುಮೆಯಿಂದ ಆಗಸದೆತ್ತರಕ್ಕೆ ಚಿಮ್ಮುವ ನೀರಿನ ಉಷ್ಣತೆ 95 ಡಿಗ್ರಿ ಸೆಲ್ಸಿಯಸ್‌ವರೆಗೂ ಇರುತ್ತದೆ. ಒಮ್ಮೊಮ್ಮೆ ಇದು 150 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುತ್ತದೆ.
*ಈ ಚಿಲುಮೆಯನ್ನು 1870ರಲ್ಲಿ ಹೆನ್ರಿ ವಾಷ್‌ಬರ್ನ್‌ ಮತ್ತು ನೆಥಾನಿಲ್‌ ಪಿ. ಲಾಂಗ್‌ಫರ್ಡ್‌ ನೇತೃತ್ವದ ಅನ್ವೇಷಕರ ತಂಡ ಪತ್ತೆ ಹಚ್ಚಿತು.
*ಇದು 60 – 90 ನಿಮಿಷಗಳಿಗೆ ಒಮ್ಮೆ ಚಿಮ್ಮುತ್ತದೆ. ದಿನಕ್ಕೆ ಸರಾಸರಿ 17 ಸಲ ಚಿಮ್ಮುತ್ತದೆ. ಇದರ ಈ ನಿರಂತರತೆಯಿಂದ ಇದಕ್ಕೆ ‘ಓಲ್ಡ್‌ ಫೇತ್‌ಫುಲ್‌’ ಬಿಸಿ ನೀರ ಚಿಲುಮೆ ಎಂಬ ಹೆಸರು. ಅಲ್ಲದೆ, ಪ್ರವಾಸಿಗರಿಗೆ *ಇದು ಹೆಚ್ಚು ಜನಪ್ರಿಯ ವೀಕ್ಷಣಾ ತಾಣವೂ ಹೌದು.
*ಇದನ್ನು ವೀಕ್ಷಿಸಲು ಚಿಲುಮೆಯ ಕೇಂದ್ರಬಿಂದುವಿನಿಂದ ಕನಿಷ್ಠ 300 ಅಡಿ ದೂರದಲ್ಲಿ ಇರಬೇಕು
*ಇದುವರೆಗೂ 10 ಲಕ್ಷಕ್ಕೂ ಹೆಚ್ಚು ಸಲ ಚಿಮ್ಮಿದೆ.
*ಒಂದು ಸಲಕ್ಕೆ 14 ಸಾವಿರದಿಂದ 32 ಸಾವಿರ ಲೀಟರ್‌ವರೆಗೂ ಬಿಸಿ ನೀರು ಚಿಮ್ಮುತ್ತದೆ.
*ಒಟ್ಟು ಒಂದೂವರೆ ನಿಮಿಷದಿಂದ ಐದು ನಿಮಿಷದವರೆಗೆ ಇದು ಚಿಮ್ಮುತ್ತದೆ.


ಮುನ್ನೂರು ಬುಗ್ಗೆಗಳು
*ಈ ಉದ್ಯಾನದಲ್ಲಿ 300 ಬಿಸಿ ನೀರ ಬುಗ್ಗೆಗಳಿವೆ. ಪ್ರಪಂಚದ ಶೇಕಡಾ 50ಕ್ಕೂ ಹೆಚ್ಚು ಬಿಸಿ ನೀರ ಬುಗ್ಗೆಗಳು ಇಲ್ಲೇ ಇವೆ.
*ಈ ರಾಷ್ಟ್ರೀಯ ಉದ್ಯಾನ ಭೂಗರ್ಭ ಶಾಖದಿಂದ (ಜಿಯೊಥರ್ಮಲ್) ಉಂಟಾಗುವ ಅನೇಕ ನೈಸರ್ಗಿಕ ಪ್ರಕ್ರಿಯೆಗಳಿಂದ ಪ್ರಸಿದ್ಧಿ ಪಡೆದಿದೆ. ಬಿಸಿ ನೀರ ಬುಗ್ಗೆಗಳು, ಹೊಂಡಗಳು ಇಲ್ಲಿಯ ಆಕರ್ಷಣೆಯ ಕೇಂದ್ರಬಿಂದು ಎನಿಸಿವೆ. ಜತೆಗೆ, ಜಲಪಾತಗಳು, ವಿಶಿಷ್ಟ ಪ್ರಾಣಿ, ಸಸ್ಯ ಸಂಕುಲದಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನಿಗಳು, ಭೂಗರ್ಭ ವಿಜ್ಞಾನಿಗಳು ಮತ್ತು ಸಂಶೋಧಕರ ಪಾಲಿಗೆ ಈ ಉದ್ಯಾನ ಹೇಳಿ ಮಾಡಿಸಿದಂತಿದೆ.

ಎಲ್ಲಿದೆ?
ಅಮೆರಿಕದ ಪಶ್ಚಿಮ ಭಾಗದಲ್ಲಿ ಇರುವ ವ್ಯೋಮಿಂಗ್‌ ನಗರದ ‘ಯೆಲ್ಲೋಸ್ಟೋನ್‌ ರಾಷ್ಟ್ರೀಯ ಉದ್ಯಾನ’ದಲ್ಲಿ ಓಲ್ಡ್‌ ಫೇತ್‌ಫುಲ್‌ ಬಿಸಿ ನೀರ ಚಿಲುಮೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.