ADVERTISEMENT

ಕಣ್ಣು ಅಂದ ಕಾಣಲು...

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST
ಕಣ್ಣು ಅಂದ ಕಾಣಲು...
ಕಣ್ಣು ಅಂದ ಕಾಣಲು...   

ಮುಖಕ್ಕೆ ಕಣ್ಣುಗಳೇ ಅಂದ,  ಸದಾ ಹೊಳೆಯುವ ಆಕರ್ಷಕ ಕಣ್ಣುಗಳು ನಮ್ಮದಾಗಬೇಕು ಎಂಬುದು ಪ್ರತಿ ಮಹಿಳೆಯರ ಆಶಯ. ಅರಳುಗಣ್ಣಿಗೆ ವಿವಿಧ ಬಗೆಯ ಮೇಕಪ್ ಮಾಡಿಕೊಳ್ಳುವ ಮೂಲಕ ಇನ್ನಷ್ಟು ಸುಂದರವಾಗಿ ಕಾಣುತ್ತಾರೆ.

ಹೆಣ್ಣಿನ ಕಣ್ಣಿಗೆ ಕಾಡಿಗೆ ಭೂಷಣ ಎಂಬ ಮಾತಿದೆ. ಹಲವು ಮಹಿಳೆಯರಿಗೆ ಕಣ್ಣಿನ ಸುತ್ತ ಕಾಡಿಗೆ ಹಚ್ಚಿಕೊಳ್ಳದಿದ್ದರೆ ಮೇಕಪ್ ಅಪೂರ್ಣ ಎನ್ನಿಸಿ ಬಿಡುತ್ತದೆ.
ಆದರೆ ಕೇವಲ ಕಾಡಿಗೆ ಮಾತ್ರ ಹಚ್ಚುವುದರಿಂದ ನಮ್ಮ ಕಣ್ಣಿನ ಹೊಳಪು ಹೆಚ್ಚುತ್ತದೆ ಎಂಬುದು ಶುದ್ಧ ಸುಳ್ಳು ಎಂದು ಸೀಸೋಲ್ ಕಾಸ್ಮೆಟಿಕ್‌ನ ಸಂಸ್ಥಾಪಕಿ ಮನೀಶಾ ಚೋಪ್ರಾ ತಿಳಿಸಿದ್ದಾರೆ.

ಅಲ್ಲದೇ ಕಾಡಿಗೆ ಇಲ್ಲದೇ ಹೇಗೆ ಕಣ್ಣನ್ನು ಇನ್ನಷ್ಟು ಅಂದವಾಗಿ ಕಾಣುವಂತೆ ಮಾಡಬಹುದು ಎಂಬುದನ್ನು ಕುರಿತು ಕೆಲವು ಸಲಹೆಗಳನ್ನು ಅವರು ಇಲ್ಲಿ ನೋಡಿದ್ದಾರೆ.

ಮಸ್ಕರಾ: ಉತ್ತಮ ಗುಣಮಟ್ಟದ ಮಸ್ಕರಾವನ್ನು ಬಳಸುವುದರಿಂದ ಕೂಡ ಕಣ್ಣಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಕಣ್ಣಿನ ರೆಪ್ಪೆಯ ಮೇಲೆ ಮಸ್ಕರಾ ಹಚ್ಚಿಕೊಳ್ಳುವುದರಿಂದ ಕಣ್ಣಗಳು ಸುಂದರವಾಗಿ ಕಾಣುತ್ತದೆ.

ಐ ಶ್ಯಾಡೋ: ತಿಳಿ ಕಂದು ಬಣ್ಣ ಅಥವಾ ಗುಲಾಬಿ ಬಣ್ಣದ ಐ ಶ್ಯಾಡೋ ಕಣ್ಣಿನ ಅಂದ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಕಾಡಿಗೆ ಹಚ್ಚದಿದ್ದಾಗ ಕಣ್ಣುಗಳು ಹೊಳೆಯುವಂತೆ ಮಾಡುವುದು ಐ ಶ್ಯಾಡೋ. ನಿಮ್ಮ ಕಣ್ಣುಗಳು ಬಟ್ಟಲು ಕಂಗಳಾಗಿದ್ದಾರೆ ಕಡು ಬಣ್ಣದ ಶೇಡ್ ಬಳಸುವುದು ಉತ್ತಮ.

ಕಾಡಿಗೆ ಪೆನ್ಸಿಲ್‌ನಿಂದ ನಿಮ್ಮ ಹುಬ್ಬನ್ನು ಅಂದವಾಗಿ ಕಾಣುವಂತೆ ಮಾಡಬಹುದು. ಗಾಢ ಕಂದು ಬಣ್ಣದ ಐ ಶ್ಯಾಡೋ ಹಚ್ಚುವುದರಿಂದ ಕಣ್ಣುಗಳ ಅಂದ ಹೆಚ್ಚುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.