ADVERTISEMENT

ಕಲ್ಲಂಗಡಿ ಹಣ್ಣಿನಿಂದ ಸೌಂದರ್ಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 19:30 IST
Last Updated 11 ಏಪ್ರಿಲ್ 2017, 19:30 IST
ಕಲ್ಲಂಗಡಿ ಹಣ್ಣಿನಿಂದ ಸೌಂದರ್ಯ
ಕಲ್ಲಂಗಡಿ ಹಣ್ಣಿನಿಂದ ಸೌಂದರ್ಯ   

ಬೇಸಿಗೆಯಲ್ಲಿ ಚರ್ಮದ ತೇವಾಂಶ ಉಳಿಸಿಕೊಳ್ಳುವುದು ಕಷ್ಟ. ಇದಕ್ಕೆ ಕಲ್ಲಂಗಡಿ ಉತ್ತಮ ಮದ್ದು. ಕಲ್ಲಂಗಡಿ ಹಣ್ಣು ಬಳಸಿ ಸೌಂದರ್ಯ ಹೇಗೆ ಕಾಪಾಡಬಹುದು ಎಂಬ ಮಾಹಿತಿ ಇಲ್ಲಿದೆ.

* ಕಲ್ಲಂಗಡಿ ಹಣ್ಣಿನ ಮಾಸ್ಕ್
ಕಲ್ಲಂಗಡಿ ಹಣ್ಣಿನಲ್ಲಿ ಇರುವ ನೀರಿನ ಅಂಶ ಚರ್ಮವನ್ನು ಮಾಯಿಶ್ಚರೈಸ್‌ ಮಾಡುತ್ತದೆ. ಮೂರು ಚಮಚ ಕಲ್ಲಂಗಡಿ ಹಣ್ಣಿನ ಪೇಸ್ಟ್, ಎರಡು ಚಮಚ  ಬಾಳೆಹಣ್ಣಿನ ಪೇಸ್ಟ್, ಒಂದು ಚಮಚ ಜೇನು ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಬೇಕು. 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು.

* ಕಲ್ಲಂಗಡಿ ಹಣ್ಣಿನ ಫೇಸ್‌ ಪ್ಯಾಕ್
ಒಣ ಚರ್ಮದವರು ಕಲ್ಲಂಗಡಿ ಹಣ್ಣು, ಗುಲಾಬಿ ರಸ, ಬಾದಾಮಿ ಪುಡಿ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಬಹುದು. ಇದು ಚರ್ಮಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ. ಬಾದಾಮಿಯಲ್ಲಿ ಎಣ್ಣೆ ಅಂಶ ಒಣ ಚರ್ಮವನ್ನು ನಿವಾರಿಸುತ್ತದೆ.

ADVERTISEMENT

* ಕಾಂತಿಯುತ ತ್ವಚೆಗೆ
ಎರಡು ಚಮಚ ಕಲ್ಲಂಗಡಿ ಹಣ್ಣಿನ ತಿರುಳು, ಎರಡು ಚಮಚ ಮೊಸರು, ಒಂದು ಚಮಚ ರಕ್ತಚಂದನ ಎಣ್ಣೆ ಮಿಶ್ರಣ ಮಾಡಿ, ಮುಖಕ್ಕೆ ಲೇಪಿಸಿ 30 ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ  ತೊಳೆಯಬೇಕು. ಇದರಿಂದ ಚರ್ಮ ಮೃದು, ಕಾಂತಿಯುತವಾಗಿ ಹೊಳೆಯುತ್ತದೆ.

* ಕಲ್ಲಂಗಡಿ ಹಣ್ಣಿನ ಮಸಾಜ್
ಕಲ್ಲಂಗಡಿ ಹಣ್ಣನ್ನು ಚೌಕಾಕಾರದಲ್ಲಿ ಕತ್ತರಿಸಿ ಒಂದು ಗಂಟೆ ಫ್ರಿಜ್‌ನಲ್ಲಿಟ್ಟು ಹೊರ ತೆಗೆಯಿರಿ, ನಂತರ ತುಂಡಗಳನ್ನು ಅಕ್ಕಿ ಹಿಟ್ಟಿನಲ್ಲಿ ಅದ್ದಿ ಮುಖ್ಕಕೆ ಉಜ್ಜಿ. ಇದು ಡೆಡ್‌ ಸ್ಕಿನ್ ತೆಗೆಯುತ್ತದೆ. ಚರ್ಮ ತಾಜಾ ಹಾಗೂ ಶುಭ್ರವಾಗಿ ಹೊಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.