ADVERTISEMENT

ಕಾಂಬೊ ಪ್ಯಾಕ್ ಶ್ರೇಣಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2014, 19:30 IST
Last Updated 3 ಜುಲೈ 2014, 19:30 IST

ಬ್ಲಾಸಮ್ ಕೊಚ್ಚರ್ ಬ್ಯೂಟಿ ಪ್ರಾಡಕ್ಟ್ಸ್ ಪ್ರೈ.ಲಿ. ಹೊಸ ಕಾಂಬೊ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. ಈ ಶ್ರೇಣಿಯು ಆಂಟಿ ಅಕ್ನಿ ಕಾಂಬೊ ಪ್ಯಾಕ್, ಆಂಟಿ ಟ್ಯಾನ್ ಕಾಂಬೊ ಪ್ಯಾಕ್ ಮತ್ತು ಆಂಟಿ ಏಜಿಂಗ್ ಕಾಂಬೊ ಪ್ಯಾಕ್ಗಳನ್ನು ಒಳಗೊಂಡಿದೆ.

ಆಂಟಿ ಅಕ್ನಿ ಕಾಂಬೊ ಪ್ಯಾಕ್ ಮೊಡವೆಗಳ ಚರ್ಮಕ್ಕೆ ಸೂಕ್ತವಾಗಿದ್ದು, ಆಂಟಿ ಟ್ಯಾನ್ ಕಾಂಬೊ ಪ್ಯಾಕ್ ಎಲ್ಲ ಬಗೆಯ ಚರ್ಮಗಳಿಗೂ ಉತ್ತಮವಾಗಿದೆ. ಆಂಟಿ ಏಜಿಂಗ್ ಕಾಂಬೊ ಪ್ಯಾಕ್ ಫರ್ಮಿಂಗ್ ಜೆಲ್ ಮತ್ತು ಫರ್ಮಿಂಗ್ ಗ್ಲೋ ಪ್ಯಾಕ್ ಜೊತೆಗೆ ಬರುತ್ತದೆ. ಈ ಎರಡರ ಸಂಯೋಜನೆಯಿಂದ ಚರ್ಮ ಮೃದುವಾಗಿ ಹೊಳೆಯುತ್ತದೆ. ಅಲ್ಲದೆ ಇದು ನಿರಿಗೆಗಳು ಹಾಗೂ ಗೆರೆಗಳನ್ನು ತೆಳುಗೊಳಿಸುತ್ತದೆ ಮತ್ತು ಚರ್ಮವನ್ನು ಬಿಗಿಗೊಳಿಸುತ್ತದೆ.
ಇವುಗಳ ಬೆಲೆ ಕ್ರಮವಾಗಿ ರೂ. 300, ರೂ. 265  ಹಾಗೂ ರೂ. 465.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.