ADVERTISEMENT

ಚಿತ್ತಾಕರ್ಷಕ ದಯಾಂಥಸ್

​ಪ್ರಜಾವಾಣಿ ವಾರ್ತೆ
Published 16 ಮೇ 2017, 3:22 IST
Last Updated 16 ಮೇ 2017, 3:22 IST
ಚಿತ್ತಾಕರ್ಷಕ ದಯಾಂಥಸ್
ಚಿತ್ತಾಕರ್ಷಕ ದಯಾಂಥಸ್   

ಮೊನಚಾದ ತುದಿಯುಳ್ಳ ಐದೆಳೆಗಳ ಗುಲಾಬಿ ಬಣ್ಣದ ಪುಟ್ಟ ಪುಟ್ಟ ತೆಳುವಾದ ಹೂಗಳನ್ನು ನೋಡಿದರೆ ನೋಡುತ್ತಲೇ ಇರಬೇಕೆನಿಸುತ್ತದೆ. ಶಾಲಾ ಮಕ್ಕಳು ಪೆನ್ಸಿಲ್‌ನ  ಶಾರ್ಪ್‌ನರ್‌ ಬಳಸಿ ಹೂವಿನ ಚಿತ್ರ ಮೂಡಿಸಿದಂತೆ ಕಾಣುವ ಈ ಗಿಡದ ಹೆಸರು ದಯಾಂಥಸ್ (Dianthus).

ದಯಾಂಥಸ್ ಸಂಕುಲದಲ್ಲಿ ಸುಮಾರು 300ಕ್ಕೂ ಅಧಿಕ ಹೂಬಿಡುವ ಸಸ್ಯಗಳಿವೆ. ಇವುಗಳ ಮೂಲ ಯುರೋಪ್ ಮತ್ತು ಏಷ್ಯಾಖಂಡ. ಇದರ ಕೆಲವು ಜಾತಿಯ ಸಸ್ಯಗಳನ್ನು ದಕ್ಷಿಣ ಮತ್ತು ಉತ್ತರ ಆಫ್ರಿಕಾದ ಭಾಗಗಳಲ್ಲಿ ಕಾಣಬಹುದು. ‘ದಯಾಂಥಸ್ ರೆಪೆನ್ಸ್’ ಎಂಬ ಸಸ್ಯವು ಮಾತ್ರ ಉತ್ತರ ಅಮೆರಿಕದಲ್ಲಿ ಕಂಡು ಬರುತ್ತದೆ.
ಇವು ಮೂಲಿಕೆಯ ಪ್ರಕಾರಕ್ಕೆ ಸೇರುತ್ತವೆ. ಕಂದು ಹಸಿರು ಅಥವಾ ನೀಲಿ ಹಸಿರು ಮಿಶ್ರಿತ ಬಣ್ಣದ ಎಲೆಗಳನ್ನು ಹೊಂದಿರುತ್ತವೆ.

ಹೂತೋಟಗಳಲ್ಲಿ ಹಾಗೂ ಪುಷ್ಪ ಪ್ರದರ್ಶನಗಳಲ್ಲಿ ಅಲಂಕಾರಿಕ ಸಸ್ಯಗಳಾಗಿ ಮತ್ತು ಹೂವಿನ ವ್ಯಾಪಾರಕ್ಕಾಗಿ ದಯಾಂಥಸ್ ಕೃಷಿ ಮಾಡಲಾಗುತ್ತದೆ.  ಈ ಹೂಗಳ ವಾಸನೆ ಲವಂಗದ ಪರಿಮಳ ಹೋಲುತ್ತವೆ. ಕೆಲ ಹೂಗಳು ಘಾಟು ಪರಿಮಳ ಬೀರುತ್ತವೆ.
-ಬಿ.ರಾಮಪ್ರಸಾದ ಭಟ್, ಹೊಸಪೇಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.