ADVERTISEMENT

ಟಾಯ್ಲೆಟ್ ಕಟ್ಟಿಸ್ತೀನಿ ಮನೆಗೆ ಬಾರೇ...

​ಪ್ರಜಾವಾಣಿ ವಾರ್ತೆ
Published 20 ಜೂನ್ 2017, 19:30 IST
Last Updated 20 ಜೂನ್ 2017, 19:30 IST
ಟಾಯ್ಲೆಟ್ ಕಟ್ಟಿಸ್ತೀನಿ ಮನೆಗೆ ಬಾರೇ...
ಟಾಯ್ಲೆಟ್ ಕಟ್ಟಿಸ್ತೀನಿ ಮನೆಗೆ ಬಾರೇ...   

ಮನೆಯಲ್ಲಿ ಶೌಚಾಲಯವಿರಬೇಕು ಎಂಬ ಸರ್ಕಾರಿ ಜಾಹೀರಾತಿನ ಮೂಲಕ ವಿದ್ಯಾ ಬಾಲನ್ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಈಗ ಅಕ್ಷಯ್ ಕುಮಾರ್ ಸರದಿ. ಅವರ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಸಿನಿಮಾದ ಟ್ರೇಲರ್ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಗ್ರಾಮೀಣ ಭಾಗದಲ್ಲಿನ  ಕಟ್ಟುಪಾಡು, ಲಿಂಗ ತಾರತಮ್ಯ ಹಾಗೂ ಮೂಢನಂಬಿಕೆಗಳ ವಿರುದ್ಧ ದನಿ ಎತ್ತಲು ಚಿತ್ರವನ್ನು ನಿರ್ದೇಶಕ ನಾರಾಯಣ್‌ ಸಿಂಗ್‌ ಅಸ್ತ್ರವಾಗಿ ಬಳಸಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೇಕರ್ ಪ್ರಣಯ ಪಕ್ಷಿಗಳಂತೆ ಕಂಗೊಳಿಸಿದ್ದಾರೆ. ಅಕ್ಷಯ್‌ ಕುಮಾರ್‌ ಅವರನ್ನು ಪ್ರೀತಿಸಿ ಮದುವೆಯಾಗಿ ಬರುವ ಭೂಮಿ, ಪ್ರಸ್ತದ ಮಾರನೇ ದಿನವೇ ಜಗಳ ತೆಗೆದು ಮನೆ ಬಿಟ್ಟು ಹೋಗುತ್ತಾರೆ.

ADVERTISEMENT

‘ಟಾಯ್ಲೆಟ್ ಕಟ್ಟಿಸುವವರೆಗೆ ನಿಮ್ಮ ಮನೆಗೆ ಬರುವುದಿಲ್ಲ’ ಎನ್ನುವುದು ಆಕೆಯ ಷರತ್ತು. ‘ಅವರು ಪ್ರೀತಿಗಾಗಿ ತಾಜ್‌ಮಹಲ್ ಕಟ್ಟಿಸಿದರು, ನಾನು ಟಾಯ್ಲೆಟ್‌ ಕಟ್ಟಿಸುತ್ತೇನೆ’ ಎಂಬ ಅಕ್ಷಯ್‌ ಮಾತಿನೊಂದಿಗೆ ಟ್ರೇಲರ್‌ ಮುಗಿಯುತ್ತದೆ. ಸಿನಿಮಾ ಆಗಸ್ಟ್‌ 11ರಂದು ಬಿಡುಗಡೆಯಾಗಲಿದೆ.

ಲಿಂಕ್‌: http://bit.ly/2se3kgF

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.