ADVERTISEMENT

ಟೆಕ್ಟ್ಸ್ ಆಧಾರಿತ ಹೊಸ ಆ್ಯಪ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 12:59 IST
Last Updated 18 ಡಿಸೆಂಬರ್ 2014, 12:59 IST

ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸಲು ಪೂರಕವಾಗುವಂತಹ ಹೊಸ ಅಪ್ಲಿಕೇಶನ್ ಒಂದನ್ನು ಟೆಕ್ಟ್ಸ್‌ವೆಬ್ ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ.

‘ನ್ಯೂ ಇಯರ್ ಸೆಲೆಬ್ರೇಷನ್ ಪ್ಯಾಕ್-೨೦೧೫’ ಎನ್ನುವ ಟೆಕ್ಟ್ಸ್ ಆಧಾರಿತ ಅಪ್ಲಿಕೇಶನ್ ಮೂಲಕ ಸ್ನೇಹಿತರಿಗೆ, ಬಂಧುಗಳಿಗೆ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಕಳುಹಿಸಬಹುದು. ಅದರೊಂದಗೆ ೨೦೧೫ರ ರಜಾ ದಿನಗಳ ಪಟ್ಟಿ ಹಾಗೂ ಪ್ರವಾಸ ಅಥವಾ ವಿಹಾರ ತಾಣಗಳು, ೨೦೧೫ರ ಭವಿಷ್ಯ ಸೇರಿದಂತೆ ಅನೇಕ ಸೇವೆಗಳು ಈ ಆ್ಯಪ್ ಮೂಲಕ ಲಭ್ಯವಾಗಲಿವೆ.

ಯಾವುದೇ ಸಾಮಾನ್ಯ ಮೊಬೈಲ್ನಲ್ಲಿಒಂದು ಎಸ್‌ಎಮ್‌ಎಸ್ ಕಳುಹಿಸುವ ಮೂಲಕ (50 ಪೈಸೆ ಶುಲ್ಕದಲ್ಲಿ) ಈ ಎಲ್ಲಾ ಸೇವೆಗಳನ್ನು ಪಡೆದುಕೊಳ್ಳಬಹುದು.

ಬಳಕೆದಾರರು ೫೧೧೧೫ ಸಂಖ್ಯೆಗೆ ೨೦೧೫ ಎಂದು ಎಸ್‌ಎಮ್‌ಎಸ್ ಕಳುಹಿಸಬೇಕು. ನಂತರ ಯಾವ ಯಾವ ಸೇವೆಗಳು ಬೇಕು ಎಂಬ ಆಯ್ಕೆಯನ್ನು ಕ್ಲಿಕ್ ಮಾಡುತ್ತ ಹೋದರೆ ಬಯಸಿದ ಸೇವೆಗಳು ಲಭ್ಯವಾಗುತ್ತವೆ. ಮಾಹಿತಿಗೆ http://www.txtweb.com/home

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.