ADVERTISEMENT

‘ದಂಗಲ್’ ಕೇಕು ನೋಡಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 19:30 IST
Last Updated 20 ಆಗಸ್ಟ್ 2017, 19:30 IST
‘ದಂಗಲ್’ ಕೇಕು ನೋಡಿ
‘ದಂಗಲ್’ ಕೇಕು ನೋಡಿ   

‘ದಂಗಲ್’ ಈಗ ಮತ್ತೆ ಸುದ್ದಿಯಲ್ಲಿದೆ. 2016ರಲ್ಲಿ ತೆರೆಕಂಡಿದ್ದ ಈ ಚಿತ್ರ ಜಗತ್ತಿನ್ನೆಲೆಡೆ ಚಿತ್ರಪ್ರಿಯರ ಮನಗೆದ್ದು ಹಲವು ದಾಖಲೆ ಬರೆದಿತ್ತು. 2016ರ ಚಿತ್ರ ಈಗ ಯಾಕೆ ಸದ್ದು ಮಾಡುತ್ತಿದೆ ಎಂದು ಯೋಚಿಸುತ್ತಿದ್ದರೆ. ಇಲ್ಲಿದೆ ಉತ್ತರ.

ಅಪ್ಪ ಮಹಾವೀರ್ ಸಿಂಗ್ ಮಕ್ಕಳಿಗಾಗಿ ಜಮೀನಿನಲ್ಲಿ ಕುಸ್ತಿ ಅಖಾಡ ಸೃಷ್ಟಿಸಿ ಕುಸ್ತಿ ಕಲಿಸುತ್ತಿರುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸನ್ನಿವೇಶವನ್ನು ದುಬೈನ ಬ್ರಾಡ್‌ವೇ ಬೇಕರಿ ಕೇಕ್‌ನಲ್ಲಿ ಮರುಸೃಷ್ಟಿಸಿದೆ. ಇದಕ್ಕೆ ಸುಮಾರು ₹25.66 ಲಕ್ಷ ವೆಚ್ಚ ತಗುಲಿದ್ದು, ಕೇಕ್ ತಯಾರಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಮೀರ್ ಖಾನ್, ಕುಸ್ತಿ ಭಂಗಿಯಲ್ಲಿ ಇರುವ ಇಬ್ಬರು ಸಹೋದರಿಯರು, ಅಖಾಡ, ಹುಲ್ಲು, ಭಾರತದ ಬಾವುಟ ಹೀಗೆ ಎಲ್ಲವೂ ಈ ಕೇಕ್‌ನಲ್ಲಿದೆ. ಆರು ಮಂದಿ ಕಲಾವಿದರ ತಂಡ ಈ ಕೇಕ್ ತಯಾರಿಸಿದೆ. ಇದಕ್ಕಾಗಿ ಬರೋಬ್ಬರಿ  ನಾಲ್ಕು ವಾರಗಳು ತಗುಲಿವೆಯಂತೆ. ಭಾರತದ 71ನೇ ಸ್ವಾತಂತ್ರ್ಯ ದಿನದ ಆಚರಣೆಗಾಗಿ ಈ ಕೇಕ್ ಅನ್ನು ತಯಾರಿಸಿರುವುದು ಮತ್ತೊಂದು ವಿಶೇಷ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.