ADVERTISEMENT

‘ದೇವತೆಗಳ ಮಗು’ ಅಬಿಸ್ಸಿನಿಯನ್

​ಪ್ರಜಾವಾಣಿ ವಾರ್ತೆ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ಅಬಿಸ್ಸಿನಿಯನ್ ಬೆಕ್ಕು
ಅಬಿಸ್ಸಿನಿಯನ್ ಬೆಕ್ಕು   

ಅಬಿಸ್ಸಿನಿಯನ್ ಬೆಕ್ಕು ವಿಶ್ವದ ಅತ್ಯಂತ ಹಳೆಯ ತಳಿಗಳಲ್ಲಿ ಒಂದು ಎಂದು ಭಾವಿಸಲಾಗಿದೆ. ಇವುಗಳ ಬಣ್ಣಬಣ್ಣದ ತುಪ್ಪಳ (ಕೂದಲು)ದಿಂದ ಈ ತಳಿಯ ಬೆಕ್ಕುಗಳನ್ನು ಸುಲಭವಾಗಿ ಗುರುತಿಸಲಾಗುತ್ತದೆ. ಆಧುನಿಕ ಕಾಲದ ಅನೇಕ ಸಾಕು ಬೆಕ್ಕುಗಳ ತಳಿಗಳೊಂದಿಗೆ ಹೋಲಿಸಿದಾಗ ಅಬಿಸ್ಸಿನಿಯನ್ ತುಂಬಾ ದೂರದ ವಸ್ತುಗಳನ್ನು ಗ್ರಹಿಸುವ ಹರಿತವಾದ ದೃಷ್ಟಿ ಸಾಮರ್ಥ್ಯವನ್ನು ಹೊಂದಿರುವ ಬೆಕ್ಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಬಿಸ್ಸಿನಿಯನ್‌ನ ವೈಜ್ಞಾನಿಕ ಹೆಸರು ಫೆಲಿಸ್ ಕ್ಯಾಟಸ್(Fe*is catus). ಶೊರ್ಥೆರ್‌ (Shorthair) ಎಂಬ ಕುಟುಂಬಕ್ಕೆ ಸೇರಿದ್ದು, ಕೆಂಪು, ನೀಲಿ, ಬೂದು ಬಣ್ಣಗಳಲ್ಲಿ ಕಂಡು ಬರುತ್ತದೆ. ಇದು ಅತ್ಯಂತ ಬುದ್ಧಿವಂತ ಸಾಕುಪ್ರಾಣಿ. ರೇಷ್ಮೆಯಂತಹ ತುಪ್ಪಳ ಮತ್ತು ಬಾದಾಮಿ ಆಕಾರದ ಕಣ್ಣುಗಳು ಇವೆ.

ಅಬಿಸ್ಸಿನಿಯನ್ 2 ಅಡಿ ಎತ್ತರ, 4.5 ಕೆಜಿ ತೂಕವನ್ನು ಹೊಂದಿದ್ದು, ಉದ್ದನೆಯ ಸ್ನಾಯುಗಳಿಂದಾವೃತವಾದ ತೆಳ್ಳನೆಯ ದೇಹ ಮತ್ತು ಕಿರಿದಾದ ಬಾಲವನ್ನು ಹೊಂದಿದೆ. ದೊಡ್ಡದಾದ ಮೊನಚಾದ ಕಿವಿಗಳಿವೆ. ಸುಮಾರು 15 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ.  ಒಂದೇ ಬಾರಿಗೆ 6 ಮರಿಗಳಿಗೆ ಜನ್ಮ ಕೊಡುತ್ತದೆ. 1882ರಲ್ಲಿ ಅಬಿಸ್ಸಿನಿಯನ್ ಬೆಕ್ಕು ತಳಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟವಾಯಿತು. 1871 ರಲ್ಲಿ ಕ್ರಿಸ್ಟಲ್ ಪ್ಯಾಲೇಸ್‌ನಲ್ಲಿ ಮೊದಲಿಗೆ ಪ್ರದರ್ಶಿಸಲ್ಪಟ್ಟಿತು ಎಂದು ಭಾವಿಸಲಾಗಿದೆ. ಅಬಿಸ್ಸಿನಿಯನ್ ಈಗ ಅಮೆರಿಕದ ಅತ್ಯಂತ ಜನಪ್ರಿಯ ದೇಶೀಯ ಕ್ಯಾಟ್ ತಳಿಗಳಲ್ಲಿ ಒಂದಾಗಿದೆ.

ADVERTISEMENT

ಅಬಿಸ್ಸಿನಿಯನ್ ಅತ್ಯಂತ ಸಕ್ರಿಯವಾದ ತಳಿಗಳಲ್ಲಿ ಒಂದು ಎಂದು ಅಂದಾಜಿಸಲಾಗಿದೆ. ಇದು ಬಹಳ ನಿಷ್ಠಾವಂತ ಮತ್ತು ವಿಧೇಯಕ ಬೆಕ್ಕು ಎಂದು ತಿಳಿದುಬಂದಿದೆ. ಮನೆಯಲ್ಲಿಯೇ ಇವುಗಳಿಗೆ ಸುಲಭವಾಗಿ ತರಬೇತಿ ನೀಡಬಹುದು.

ಕುತೂಹಲಕಾರಿ ಸಂಗತಿಮತ್ತು ವೈಶಿಷ್ಟ್ಯ:  ಪ್ರಾಚೀನ ಈಜಿಪ್ಟ್‌ನಲ್ಲಿ ಈ ಬೆಕ್ಕುಗಳನ್ನು ಪುರಾತನ ಈಜಿಪ್ಟ್ ದೇವತೆಗಳ ಒಂದು ಚಿಹ್ನೆ ಎಂದು ಪರಿಗಣಿಸಲಾಗಿತ್ತು. ಆದ್ದರಿಂದ ಇದನ್ನು ಪವಿತ್ರ ಪ್ರಾಣಿ ಎಂದು ಭಾವಿಸಲಾಗಿತ್ತು.

ಅಬಿಸ್ಸಿನಿಯನ್ ‘ದೇವತೆಗಳ ಮಗು’ ಎಂದು ಪರಿಗಣಿಸಿ ಆರಾಧಿಸಲಾಗುತ್ತಿತ್ತು. 

* Abyssinian– ಅಬಿಸ್ನಿಯನ್
* ಮೂಲ: ಈಜಿಪ್ಟ್
* ಗುಂಪು: ಬೆಕ್ಕು
* ಗಾತ್ರ : 60 ಸೆಂ.ಮೀ (2 ಅಡಿ ಎತ್ತರ)
* ತೂಕ: 4.5 ಕೆಜಿ
* ಜೀವಿತಾವಧಿ: 15 ರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.