ADVERTISEMENT

ನಗು ನಗುತಾ ನಲಿನಲಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2017, 19:30 IST
Last Updated 6 ಜನವರಿ 2017, 19:30 IST

ಶಿಷ್ಯ: ಗುರುಗಳೆ ನೀವು ಬರೆದ ಪುಸ್ತಕ ನನಗೆ ದಾರಿ ದೀಪ ಆಯಿತು
ಗುರುಗಳು: ಅದು ಹೇಗೆ?
ಶಿಷ್ಯ: ನಿನ್ನೆ ರಾತ್ರಿ ದಾರಿಲ್ಲಿ ಬರಬೇಕಾದರೆ ಬೀದಿ ದೀಪಗಳಿರಲಿಲ್ಲ ನಿಮ್ಮ ಪುಸ್ತಕಕ್ಕೆ ಬೆಂಕಿ ಹಚ್ಚಿ ದೀಪ ಮಾಡಿಕೊಂಡೆ!

***
ದ್ವಿಚಕ್ರ ವಾಹನದಲ್ಲಿ ನಾಲ್ಕು ಜನ ಹುಡುಗರು ಹೋಗುತ್ತಿದ್ದರು.
ಅವರನ್ನ ತಡೆದ ಟ್ರಾಫಿಕ್ ಪೋಲಿಸ್ ಮೂರು
ಜನ ದ್ವಿಚಕ್ರ ವಾಹನದಲ್ಲಿ ಚಲಿಸುವುದನ್ನು  ನಿಷೇಧಿಸಲಾಗಿದೆ ಅಂಥದರಲ್ಲಿ ನೀವು ನಾಲ್ಕು
ಜನ !
ಭಯಭೀತನಾದ ಹುಡುಗ ಹಿಂದೆ ತಿರುಗಿ ನೋಡಿ
ಅಯ್ಯೋ!ನಾವು ಇದ್ದದ್ದು ಐದು ಜನ ಇನ್ನೊಬ್ಬ ಎಲ್ಲ್ ಬಿದ್ದನೋಡ್ರೋ...

***
ಗುಂಡಾ: ಡಾಕ್ಟರ್, ನನಗೆ ಉಸಿರಾಟದ ತೊಂದರೆ ಇದೆ.
ಡಾಕ್ಟರ್:ಚಿಂತೆ ಮಾಡಬೇಡ. ನಾನು ನಿಲ್ಲಿಸಿ ಬಿಡ್ತೀನಿ.

***
ಒಂದು ಹಳ್ಳಿಯ ಪಂಚಾಯ್ತಿ ಕಚೇರಿಯಲ್ಲಿ ಈ ರೀತಿ ಬೋರ್ಡ್‌ ನೇತು ಹಾಕಲಾಗಿತ್ತು
ಹೆಬ್ಬೆಟ್ಟು ಒತ್ತಿ ಸಹಿ ಮಾಡಿದ ಬೆರಳನ್ನು ಗೋಡೆಯ ಮೇಲೆ ಒರೆಸಿ ಗಲೀಜು ಮಾಡಬಾರದು
ಅದರ ಕೆಳಗ ಗುಂಡ ಬರೆದ...
‘ನೀ ಹಾಕಿದ ಬೋರ್ಡ್ ಅವರಿಗೆ
ಓದಾಕ ಬಂದಿದ್ರ ಮತ್ಯಾಕ್ ಹೆಬ್ಬಟ್ಟ್ ಒತ್ತಿದ್ರಲೇ....!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.