ADVERTISEMENT

ನಟಿಯ ಆರೋಗ್ಯ ಮೀಮಾಂಸೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ನಟಿಯ ಆರೋಗ್ಯ ಮೀಮಾಂಸೆ
ನಟಿಯ ಆರೋಗ್ಯ ಮೀಮಾಂಸೆ   
ರೂಪದರ್ಶಿಯರ ಚಂದನದ ಗೊಂಬೆಗಳಂಥ ದೇಹಸಿರಿಗೆ ಬೆರಗಾಗದವರ್‍ಯಾರು? ವಯಸ್ಸು ನಲವತ್ತಾದರೂ ಹೇಗಪ್ಪಾ ಇವರು, ತಿದ್ದಿ ತೀಡಿದಂತಹ ಮೈಕಟ್ಟನ್ನು ಹೊಂದಿರುತ್ತಾರೆ ಎಂಬ ಕುತೂಹಲ ಸಾಮಾನ್ಯ.
 
‘ಸುಂದರವಾಗಿ ಕಾಣುವುದು ಸುಲಭವಲ್ಲ. ಸೌಂದರ್ಯ ಮತ್ತು ಆರೋಗ್ಯದ ನಡುವೆ ಸಮತೋಲನ ಸಾಧಿಸುವುದು ಕಲೆ’ ಎನ್ನುವುದು ಭುವನ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ನಿಕೋಲ್‌ ಫರಿಯಾ ಅಭಿಮತ. ಅವರು ತಮ್ಮ ಫಿಟ್‌ನೆಟ್‌ ಗುಟ್ಟನ್ನು ಇಲ್ಲಿ ಹಂಚಿಕೊಂಡಿದ್ದಾರೆ...
 
*  ವ್ಯಾಯಾಮವೇ ಮೊದಲು
ಸ್ನಾಯುಗಳ ಕ್ಷಮತೆ ಹೆಚ್ಚಿಸುವ ವ್ಯಾಯಾಮದ ಪಟ್ಟುಗಳಿಗೆ ನಾನು ಪ್ರಾಮುಖ್ಯ ನೀಡುತ್ತೇನೆ. ಪ್ರತಿದಿನ 40–45 ನಿಮಿಷ ಜಿಮ್‌ನಲ್ಲಿ ಬೆವರಿಳಿಸುತ್ತೇನೆ.   
 
* ಸಮಚಿತ್ತಕ್ಕೆ ಧ್ಯಾನದ ಮೊರೆ
ಭಾವೋದ್ವೇಗವನ್ನು ನಿಯಂತ್ರಣದಲ್ಲಿರಿಸಲು ಧ್ಯಾನ ಸಹಾಯಕ. ಮಾನಸಿಕವಾಗಿ ಸದೃಢವಾಗಬೇಕಾದರೆ ಪ್ರತಿಯೊಬ್ಬರು ಧ್ಯಾನ ಮಾಡಲೇಬೇಕು. ಇದರಿಂದ ದೇಹ ಮತ್ತು ಮನಸ್ಸಿನ ದ್ವಂದ್ವ ದೂರವಾಗುತ್ತದೆ. ಧ್ಯಾನದ ಭಾಗವೇ ಆಗಿರುವ ಉಸಿರಾಟವು ವ್ಯಕ್ತಿಯ ನಡವಳಿಕೆ ಮತ್ತು ಯೋಚನಾ ಲಹರಿಯ ಮೇಲೆ ಪರಿಣಾಮ ಬೀರುತ್ತದೆ. 
 
* ಬೇಕಾದಷ್ಟು ನೀರು ಕುಡಿಯಿರಿ
ದೇಹ ನಿರ್ಜಲಿಕರಣವಾಗಬಾರದು ಇದೇ ಕಾರಣಕ್ಕೆ ನಾನು ಸಾಕಷ್ಟು ನೀರು ಕುಡಿಯುತ್ತೇನೆ. ಇದರಿಂದ ದೇಹದ ಕಲ್ಮಷಗಳು ಹೊರಹೋಗುತ್ತದೆ. ಕಡಿಮೆ ನೀರು ಕುಡಿಯುವುದರಿಂದ ಕಲ್ಮಶಗಳೆಲ್ಲ ದೇಹದಲ್ಲಿಯೇ ಶೇಖರಣೆಗೊಂಡು ಕಾಯಿಲೆಗಳಿಗೆ ಎಡೆಮಾಡಿಕೊಡುತ್ತದೆ.
 
* ಆರೋಗ್ಯಕರ ಆಹಾರ ಸೇವಿಸಿ
ಹಣ್ಣು ಮತ್ತು ತರಕಾರಿಗಳನ್ನು ಮೊಗೆಮೊಗೆದು ಸೇವಿಸುತ್ತೇನೆ. ಊಟಕ್ಕೆ ಮೊದಲು ಇವೆರಡು ನನಗೆ ಬೇಕೆ ಬೇಕು. ಖಾಲಿ ಹೊಟ್ಟೆಯಲ್ಲಿದ್ದಾಗ ನಾವು ಸೇವಿಸುವ ಆಹಾರದ ಅಂಶಗಳನ್ನು ದೇಹ  ಬಹುಬೇಗ ಹೀರಿಕೊಳ್ಳುತ್ತದೆ. ಹಾಗಾಗಿ ಹಸಿವೆಯಾದಾಗ ಆರೋಗ್ಯಕರವಾದ ಆಹಾರವನ್ನೇ ಸೇವಿಸಬೇಕು. ಜಂಕ್‌ಫುಡ್‌ಗಳಿಂದ ದೂರವೇ ಇರಬೇಕು. ಇದರಿಂದ ದಪ್ಪಗಾಗುವುದನ್ನು ನಿಯಂತ್ರಿಸಬಹುದು. 
 
* ಸಂತೋಷವಾಗಿರಿ
ಬಿಡುವಾಗಿದ್ದಾಗ ನನ್ನ ಕೋಣೆಯ ಬಾಗಿಲು ಹಾಕಿಕೊಂಡು ನೃತ್ಯ ಮಾಡುತ್ತೇನೆ. ನನಗೆ ನೃತ್ಯ ಮಾಡುವುದೆಂದರೆ ತುಂಬಾ ಇಷ್ಟ. ಇದು ದೇಹದ ಕ್ಯಾಲೋರಿಯನ್ನು ಕಡಿಮೆ ಮಾಡುತ್ತದೆ. ಜಿಮ್‌ನಲ್ಲಿ ದೇಹ ದಂಡಿಸುವುದಕ್ಕಿಂತ ಇದು ಉತ್ತಮ ಉಪಾಯ. ಜೊತೆಗೆ ಮನಸು ಉಲ್ಲಾಸವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.